Advertisement
ಆಸ್ಟ್ರೇಲಿಯದ 454 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ನ್ಯೂಜಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೆ 63 ರನ್ ಮಾಡಿ ದ್ವಿತೀಯ ದಿನದಾಟ ಮುಗಿಸಿ ಭರವಸೆ ಮೂಡಿಸಿತ್ತು. ಆದರೆ ರವಿವಾರ ಬ್ಯಾಟಿಂಗ್ ಮುಂದುವರಿಸಿ 251ಕ್ಕೆ ಆಲೌಟ್ ಆಯಿತು. ಆಫ್ಸ್ಪಿನ್ನರ್ ನಥನ್ ಲಿಯೋನ್ 5, ವೇಗಿ ಪ್ಯಾಟ್ ಕಮಿನ್ಸ್ 3 ವಿಕೆಟ್ ಹಾರಿಸಿ ಕಿವೀಸ್ ರೆಕ್ಕೆ ಕತ್ತರಿಸಿದರು.
ರವಿವಾರ 5 ರನ್ ಆಗುವಷ್ಟರಲ್ಲಿ ನ್ಯೂಜಿಲ್ಯಾಂಡಿನ ಆರಂಭಿಕ ಜೋಡಿಯನ್ನು ಲಿಯೋನ್ ಬೇರ್ಪಡಿಸಿದರು. 34 ರನ್ ಮಾಡಿದ ಬ್ಲಿಂಡೆಲ್ ಕ್ಲೀನ್‌ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಲ್ಯಾಥಂ (49) ಮತ್ತು ರಾವಲ್ (31) 2ನೇ ವಿಕೆಟಿಗೆ 49 ರನ್ ಒಟ್ಟುಗೂಡಿಸಿದರು. ಈ ಜೋಡಿಯನ್ನೂ ಬೇರ್ಪಡಿಸುವ ಮೂಲಕ ಪ್ರವಾಸಿಗರ ಮೇಲೆ ಲಿಯೋನ್ ಅಪಾಯದ ಬಾವುಟ ಹಾರಿಸಿದರು.
Related Articles
Advertisement
ಸೋಮರ್‌ವಿಲ್ಲೆ (0) ಮತ್ತು ವ್ಯಾಗ್ನರ್ (0) ಅವರ ವಿಕೆಟ್‌ಗಳನ್ನು ಒಂದೇ ಓವರಿನಲ್ಲಿ ಹಾರಿಸಿದ ಲಿಯೋನ್, ಕೊನೆಯಲ್ಲಿ ಮ್ಯಾಟ್ ಹೆನ್ರಿಗೆ (3) ಪೆವಿಲಿಯನ್ ಹಾದಿ ತೋರಿಸಿ 17ನೇ “5 ಪ್ಲಸ್’ ವಿಕೆಟ್ ಬೇಟೆಯನ್ನು ಪೂರ್ತಿಗೊಳಿಸಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-454 ಮತ್ತು ವಿಕೆಟ್ ನಷ್ಟವಿಲ್ಲದೆ 40 (ವಾರ್ನರ್ ಬ್ಯಾಟಿಂಗ್ 23, ಬರ್ನ್ಸ್ ಬ್ಯಾಟಿಂಗ್ 16). ನ್ಯೂಜಿಲ್ಯಾಂಡ್-251 (ಫಿಲಿಪ್ಸ್ 52, ಲ್ಯಾಥಂ 49, ಬ್ಲಿಂಡೆಲ್ 34, ರಾವಲ್ 31, ಆ್ಯಸ್ಟಲ್ ಔಟಾಗದೆ 25, ಲಿಯೋನ್ 68ಕ್ಕೆ 5, ಕಮಿನ್ಸ್ 44ಕ್ಕೆ 3).