Advertisement

Test; ಅಶ್ವಿ‌ನ್‌ ಮತ್ತೆ ನಂ.1 ಬೌಲರ್‌: ಬುಮ್ರಾ-ಹೇಝಲ್‌ವುಡ್‌ಗೆ ಜಂಟಿ 2ನೇ ಸ್ಥಾನ

12:28 AM Mar 14, 2024 | Team Udayavani |

ದುಬಾೖ: ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ ಕಿತ್ತ ಸಾಧನೆಗೈದ ರವಿಚಂದ್ರನ್‌ ಅಶ್ವಿ‌ನ್‌ ನೂತನ ಐಸಿಸಿ ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಮರಳಿ ಅಗ್ರಸ್ಥಾನ ಕ್ಕೇರಿದ್ದಾರೆ. ನಂ.1 ಸ್ಥಾನದಲ್ಲಿದ್ದ ಜಸ್‌ಪ್ರೀತ್‌ ಬುಮ್ರಾ ಆಸ್ಟ್ರೇಲಿಯದ ಜೋಶ್‌ ಹೇಝಲ್‌ವುಡ್‌ ಅವರೊಂದಿಗೆ ಜಂಟಿ 2ನೇ ಸ್ಥಾನಿಯಾಗಿದ್ದಾರೆ.

Advertisement

ಈ ವರ್ಷಾರಂಭದಲ್ಲಿ ನಂ.1 ಟೆಸ್ಟ್‌ ಬೌಲರ್‌ ಆಗಿದ್ದ ಆರ್‌. ಅಶ್ವಿ‌ನ್‌ ಸ್ಥಾನಕ್ಕೆ ಬಳಿಕ ಜಸ್‌ಪ್ರೀತ್‌ ಬುಮ್ರಾ ಲಗ್ಗೆ ಇರಿಸಿದ್ದರು. ಪ್ರಸ್ತುತ ಅಶ್ವಿ‌ನ್‌ 870 ರೇಟಿಂಗ್‌ ಅಂಕ ಹೊಂದಿದ್ದಾರೆ. ಬುಮ್ರಾ ಮತ್ತು ಹೇಝಲ್‌ವುಡ್‌ ತಲಾ 847 ಅಂಕ ಗಳಿಸಿದ್ದಾರೆ.

ಇಂಗ್ಲೆಂಡ್‌ ಸರಣಿಯಲ್ಲಿ ಮಿಂಚಿದ ಕುಲದೀಪ್‌ ಯಾದವ್‌ 15 ಸ್ಥಾನ ಜಿಗಿದು 16ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ. ಆಸ್ಟ್ರೇಲಿಯ ವಿರುದ್ಧ ಮಿಂಚಿದ ನ್ಯೂಜಿಲ್ಯಾಂಡ್‌ನ‌ ಮ್ಯಾಟ್‌ ಹೆನ್ರಿ ಕೂಡ ಜೀವನಶ್ರೇಷ್ಠ ಬೌಲಿಂಗ್‌ ರ್‍ಯಾಂಕಿಂಗ್‌ ಸಂಭ್ರಮದಲ್ಲಿದ್ದಾರೆ (12).

ಆರಕ್ಕೇರಿದ ರೋಹಿತ್‌
ಧರ್ಮಶಾಲಾದಲ್ಲಿ ಶತಕ ಬಾರಿಸಿದ ರೋಹಿತ್‌ ಶರ್ಮ ಬ್ಯಾಟಿಂಗ್‌ ರ್‍ಯಾಂಕಿಂಗ್‌ ನಲ್ಲಿ 5 ಸ್ಥಾನಗಳ ಪ್ರಗತಿ ಯೊಂದಿಗೆ 6ನೇ ಸ್ಥಾನಕ್ಕೆ ಏರಿದ್ದಾರೆ. ಸರಣಿ ಯಲ್ಲಿ 700 ರನ್‌ ಗಡಿ ದಾಟಿದ ಯಶಸ್ವಿ ಜೈಸ್ವಾಲ್‌ 8ನೇ ಸ್ಥಾನಕ್ಕೆ ಬಂದಿ ದ್ದಾರೆ. ಅವರದು 2 ಸ್ಥಾನಗಳ ಪ್ರಗತಿ. ಈ ಸಾಧನೆಯೊಂದಿಗೆ ಅವರು ವಿರಾಟ್‌ ಕೊಹ್ಲಿ ಅವರನ್ನು ಮೀರಿ ನಿಂತರು. ಇಂಗ್ಲೆಂಡ್‌ ಸರಣಿಯಿಂದ ಹೊರಗುಳಿ ದಿದ್ದ ಕೊಹ್ಲಿ 9ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ. ಶುಭಮನ್‌ ಗಿಲ್‌ 11 ಸ್ಥಾನ ಮೇಲೇರಿದ್ದು, 20ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ.

ಟಾಪ್‌-10 ಟೆಸ್ಟ್‌ ಬೌಲರ್
1. ಆರ್‌. ಅಶ್ವಿ‌ನ್‌ 870
2. ಜೋಶ್‌ ಹೇಝಲ್‌ವುಡ್‌ 847
2. ಜಸ್‌ಪ್ರೀತ್‌ ಬುಮ್ರಾ 847
4. ಕಾಗಿಸೊ ರಬಾಡ 834
5. ಪ್ಯಾಟ್‌ ಕಮಿನ್ಸ್‌ 820
6. ನಥನ್‌ ಲಿಯಾನ್‌ 801
7. ರವೀಂದ್ರ ಜಡೇಜ 788
8. ಪ್ರಭಾತ್‌ ಜಯಸೂರ್ಯ 783
9. ಜೇಮ್ಸ್‌ ಆ್ಯಂಡರ್ಸನ್‌ 739
10. ಶಾಹೀನ್‌ ಶಾ ಅಫ್ರಿದಿ 733

Advertisement
Advertisement

Udayavani is now on Telegram. Click here to join our channel and stay updated with the latest news.

Next