Advertisement

ಟೆಸ್ಟ್‌: ಓವರ್‌ ಮುಗಿದ ಮೇಲೆ 45 ಸೆಕೆಂಡ್‌ ಅಂತರ

12:30 AM Mar 14, 2019 | |

ಬೆಂಗಳೂರು: ಟೆಸ್ಟ್‌ ಕ್ರಿಕೆಟ್‌ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಕಾರಣ, ಅದನ್ನು ಉಳಿಸಿಕೊಳ್ಳಲು ಅಂತಾರಾಷ್ಟ್ರೀಯ  ಕ್ರಿಕೆಟ್‌ ಸಂಸ್ಥೆ ಹಲವು ಯತ್ನಗಳನ್ನು ಮಾಡುತ್ತಿದೆ. ಇದೇ ವರ್ಷ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಶುರುವಾಗುತ್ತಿರುವ ಕಾರಣ, ಅಲ್ಲೇ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು, ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಕೆಲವು ಶಿಫಾರಸುಗಳನ್ನು ಮಾಡಿದೆ. ಈ ಸಂಸ್ಥೆ ರೂಪಿಸಿದ ನಿಯಮಗಳನ್ನೇ ಐಸಿಸಿ ಇದುವರೆಗೆ ಅಳವಡಿಸಿಕೊಂಡು ಬಂದಿದೆ.

Advertisement

ಬೆಂಗಳೂರಿನಲ್ಲೇ ಇತ್ತೀಚೆಗೆ ಎಂಸಿಸಿ ಸಭೆ ನಡೆದಿತ್ತು. ಇಂಗ್ಲೆಂಡ್‌ನ‌ ಮಾಜಿ ಕ್ರಿಕೆಟಿಗ ಮೈಕ್‌ ಗ್ಯಾಟಿಂಗ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಸೇರಿದಂತೆ ಹಲವು ದಿಗ್ಗಜರು ಸೇರಿ ಹಲವು ಶಿಫಾರಸುಗಳನ್ನು ಮಾಡಿದ್ದಾರೆ.

ಶಿಫಾರಸುಗಳಲ್ಲೇನಿದೆ?
1. ಪ್ರತಿ ಓವರ್‌ ಮುಗಿದ ಮೇಲೆ ಮತ್ತೂಂದು ಓವರ್‌ ಶುರು ಮಾಡಲು 45 ಸೆಕೆಂಡ್‌ಗಳ ನಿರ್ದಿಷ್ಟ ಅಂತರಕ್ಕೆ ಆದ್ಯತೆ. ಇದು ಮುಗಿದ ಮೇಲೆ ಎರಡೂ ತಂಡಗಳಿಗೆ ತತ್‌ಕ್ಷಣ ಎಚ್ಚರಿಕೆ. ಸಿದ್ಧವಾಗಿಲ್ಲದ ತಂಡಕ್ಕೆ 5  ರನ್‌ಗಳ ದಂಡ ವಿಧಿಸುವುದು. ಓವರ್‌ ನಡುವಿನ ಅಂತರವನ್ನು ಹೊಸ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬಂದಿದ್ದರೆ 60 ಸೆಕೆಂಡ್‌, ಬೌಲರ್‌ ಬದಲಾಯಿಸಬೇಕಿದ್ದರೆ 80 ಸೆಕೆಂಡ್‌ಗೆ ಹೆಚ್ಚಿಸಲು ಅವಕಾಶ.
2. ಬ್ಯಾಟ್ಸ್‌ಮನ್‌ ಔಟಾದ ಕೂಡಲೇ ಇನ್ನೊಬ್ಬ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬರಲು ನಿರ್ದಿಷ್ಟ ಸಮಯ ರೂಪಿಸುವುದು.
3. ಡಿಆರ್‌ಎಸ್‌ನಲ್ಲಿ ನಿರ್ದಿಷ್ಟ ಸಮಯಪರಿಪಾಲನೆ ಶಿಷ್ಟಾಚಾರವನ್ನು ತೆಗೆದುಹಾಕುವುದು. ಕೆಲವೊಮ್ಮೆ ತಾಂತ್ರಿಕ ಕೇಂದ್ರದವರಿಗೆ ಬ್ಯಾಟ್ಸ್‌ಮನ್‌ ಔಟ್‌ ಎನ್ನುವುದು ಕೂಡಲೇ ಗೊತ್ತಾಗಿರುತ್ತದೆ, ಆಗ ಅವರು ಸಮಯವಾಗುವುದಕ್ಕೆ ಕಾಯದೇ ತಕ್ಷಣ ಟೀವಿ ಅಂಪಾಯರ್‌ಗೆ ತಿಳಿಸಲು ಅವಕಾಶ ನೀಡುವುದು.
4. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲ ದೇಶಗಳಲ್ಲಿ ಒಂದೇ ರೀತಿಯ ಚೆಂಡು ಬಳಸಲು ಆದ್ಯತೆ ನೀಡುವುದು. ಈಗ ಭಾರತದಲ್ಲಿ ಎಸ್‌ಜಿ, ಆಸ್ಟ್ರೇಲಿಯದಲ್ಲಿ ಕುಕಾಬುರಾ, ಇಂಗ್ಲೆಂಡ್‌ ಡ್ನೂಕ್‌ಗಳನ್ನು ಉಪಯೋಗಿಸಲಾಗುತ್ತದೆ. ಅದರ ಬದಲು ಏಕರೀತಿಯ ಚೆಂಡಿನ ಬಳಕೆ.
5. ಏಕದಿನ, ಟಿ20ಯಲ್ಲಿ ನೋಬಾಲ್‌ ಎಸೆತದಲ್ಲಿ ಮುಂದಿನ ಎಸೆತದಲ್ಲಿ ಫ್ರೀಹಿಟ್‌ ಅವಕಾಶ ನೀಡಲಾಗುತ್ತದೆ. ಅಂತಹದ್ದೇ ಅವಕಾಶವನ್ನು ಟೆಸ್ಟ್‌ ನೀಡಲು ಚಿಂತನೆ. ಇದರಿಂದ ಪದೇ ಪದೇ ನೋಬಾಲ್‌ ಮಾಡುವುದನ್ನು ತಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next