Advertisement

ಟೆಸ್ಲಾ ಸಂಸ್ಥೆಯಿಂದ ಶೇ. 10 ಸಿಬ್ಬಂದಿಯನ್ನು ತೆಗೆದುಹಾಕಲು ನಿರ್ಧಾರ

07:48 PM Jun 03, 2022 | Team Udayavani |

ವಾಷಿಂಗ್ಟನ್‌: ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್ ತನ್ನ ಸಂಸ್ಥೆಯಿಂದ ಒಂದಿಷ್ಟು ಸಿಬ್ಬಂದಿಯನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ.

Advertisement

ಜೊತೆಗೆ, ಕಂಪನಿಗೆ ಸದ್ಯಕ್ಕೆ ಯಾವುದೇ ನೇಮಕಾತಿ ನಡೆಯಕೂಡದು, ಈಗಾಗಲೇ ಅಂತಿಮ ಹಂತದಲ್ಲಿರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಿ ಎಂದು ಅವರು ಸಂಸ್ಥೆಯ ಅಧಿಕಾರಿಗಳಿಗೆ ಮೇಲ್‌ ಮಾಡಿದ್ದಾರೆ ಎಂದು ವರದಿ ಮಾಡಿದೆ.

ಟೆಸ್ಲಾ ಸಂಸ್ಥೆಯು ವಿಶ್ವಾದ್ಯಂತ ಸುಮಾರು 1 ಲಕ್ಷ ಸಿಬ್ಬಂದಿ ಹೊಂದಿದೆ. ಇದೀಗ ಅದರಲ್ಲಿ ಶೇ. 10 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಮಸ್ಕ್ ಯೋಜನೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯದ ಆರ್ಥಿಕತೆಯ ಬಗ್ಗೆ ತಮಗೆ ಅತಿ ಕೆಟ್ಟ ಭಾವನೆಯಿರುವುದಾಗಿಯೂ ಮಸ್ಕ್ ಹೇಳಿಕೊಂಡಿದ್ದಾರೆ. ನೇಮಕಾತಿ ಸ್ಥಗಿತದ ಬಗ್ಗೆ ಮಸ್ಕ್ ಅವರಿಂದ ಸಂದೇಶ ಬರುವ ವೇಳೆಯಲ್ಲಿ ಸಂಸ್ಥೆಯ ಟೋಕಿಯೋ, ಬರ್ಲಿನ್‌ ಕಚೇರಿಗಳಲ್ಲಿ ಒಟ್ಟು 5000 ಸಿಬ್ಬಂದಿಗೆ ಕೆಲಸವಿರುವುದಾಗಿ ಲಿಂಕಡ್‌ಇನ್‌ನಲ್ಲಿ ಸಂಸ್ಥೆಯಲ್ಲಿ ಪೋಸ್ಟ್‌ ಮಾಡಲಾಗಿತ್ತು. ಮಸ್ಕ್ ಸೂಚನೆಯ ನಂತರ ಆ ಪೋಸ್ಟ್‌ ಹಿಂಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next