Advertisement

ಬೆಂಗಳೂರಿನಲ್ಲಿ ಟೆಸ್ಲಾ ಶೋರೂಂ? ಭಾರತದಲ್ಲಿ ಒಟ್ಟು 3 ಶೋರೂಂ ತೆರೆಯಲು ಸಂಸ್ಥೆ ನಿರ್ಧಾರ

08:20 PM Apr 09, 2021 | |

ನವದೆಹಲಿ: ಹೆಸರಾಂತ ಇಲೆಕ್ಟ್ರಿಕ್‌ ಕಾರು ತಯಾರಿಕಾ ಸಂಸ್ಥೆಯಾದ ಟೆಸ್ಲಾ ಕಂಪನಿ, ಭಾರತದಲ್ಲಿ ತನ್ನ ಕಾರು ತಯಾರಿಕಾ ಘಟಕ ಸ್ಥಾಪಿಸಿದರೆ ಆ ಕಾರುಗಳಿಗೆ ಶೋ ರೂಂ ಎಲ್ಲೆಲ್ಲಿ ತೆರೆಯಲಿವೆ ಎಂಬ ಕುತೂಹಲ ಎಲ್ಲರಲ್ಲಿದೆ. ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಹೇಳಲಾಗಿದೆ.

Advertisement

ಒಟ್ಟು ಮೂರು ಶೋರೂಂಗಳನ್ನು ಕಂಪನಿ ತೆರೆಯಲು ಉದ್ದೇಶಿಸಿದ್ದು, ಅದರಲ್ಲೊಂದನ್ನು ಬೆಂಗಳೂರಿನಲ್ಲಿ, ಇನ್ನೆರಡನ್ನು ಕ್ರಮವಾಗಿ ನವದೆಹಲಿ ಹಾಗೂ ಮುಂಬೈನಲ್ಲಿ ತೆರೆಯಲು ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಇದಕ್ಕಾಗಿ, ಕಂಪನಿಯ ಕೆಲ ಪ್ರತಿನಿಧಿಗಳು ಬೆಂಗಳೂರು, ನವದೆಹಲಿ, ಮುಂಬೈನಲ್ಲಿ 20 ಸಾವಿರದಿಂದ 30 ಸಾವಿರ ಚದುರಡಿಯ ಜಾಗವನ್ನು ಹುಡುಕಲಾರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ :1200 ಕೋಟಿ ಅನುದಾನವನ್ನು KSRTCಗೆ ನೀಡಲಾಗಿದೆ : ಅಶ್ವತ್ಥ್ ನಾರಾಯಣ್

Advertisement

Udayavani is now on Telegram. Click here to join our channel and stay updated with the latest news.

Next