ಸ್ಯಾನ್ ಫ್ರಾನ್ಸಿಸ್ಕೊ: ಭಾರತದ ಯಾವ ಸ್ಥಳದಲ್ಲಿ ಟೆಸ್ಲಾ ಕಂಪನಿಯ ನೂತನ ಘಟಕವನ್ನು ಆರಂಭಿಸಲಾಗುವುದು ಎನ್ನುವುದನ್ನು ಈ ವರ್ಷದ ಅಂತ್ಯದ ವೇಳೆಗೆ ನಿರ್ಧರಿಸಲಾಗುವುದು ಎಂದು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ತಯಾರಿಕಾ ಘಟಕವನ್ನು ಆರಂಭಿಸುವ ಬಗ್ಗೆ ಟೆಸ್ಲಾ ಗಂಭೀರವಾಗಿ ಯೋಚಿಸುತ್ತಿದೆ’ ಎಂದು ಹೇಳಿದ್ದಾರೆ. ಇದೇ ರೀತಿ ಮೆಕ್ಸಿಕೊದಲ್ಲೂ ಕೂಡ ಟೆಸ್ಲಾ ಕಾರು ತಯಾರಿಕಾ ಘಟಕ ಆರಂಭಿಸುವ ನಿಟ್ಟಿನಲ್ಲಿ ಕೆಲಸಗಳು ಪ್ರಗತಿಯಲ್ಲಿವೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ವಿಶ್ವದಲ್ಲೇ ಐಷಾರಾಮಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಟೆಸ್ಲಾ ಖ್ಯಾತಿ ಪಡೆದಿದೆ.