Advertisement

ಉಗ್ರರಿಂದ ಅಣು ಸಮರ ಸಾಧ್ಯತೆ: ಜನರಲ್‌ ರಾವತ್‌ ಎಚ್ಚರಿಕೆ

11:11 AM Jan 17, 2018 | Team Udayavani |

ಹೊಸದಿಲ್ಲಿ : ಭಾರತದ ಗಡಿ ನುಸುಳಿ ಬರುವ ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದು ಭವಿಷ್ಯದಲ್ಲಿ ಅಣ್ವಸ್ತ್ರಗಳು ಕೂಡ ಅವರ ಕೈವಶವಾಗುವ ಸಾಧ್ಯತೆ ಇರುವುದರಿಂದ ದೇಶಕ್ಕೆ ಉಗ್ರರಿಂದ ಅಣು ಸಮರದ ಬೆದರಿಕೆ ಇದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಎಚ್ಚರಿಸಿದ್ದಾರೆ.

Advertisement

ದಿಲ್ಲಿಯಲ್ಲಿ ನಡೆದ 2018 ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಉಗ್ರರಿಗೆ ಅಣ್ವಸ್ತ್ರಗಳು ಸುಲಭದಲ್ಲಿ ಕೈವಶವಾಗುವ ಅಪಾಯ ಇರುವುದರಿಂದ ಮನುಕುಲ ನಾಶಕ್ಕೆ ಇದು ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಅಣ್ವಸ್ತ್ರಗಳು ಮತ್ತು ರಾಸಾಯನಿಕ ಅಸ್ತ್ರಗಳು ಉಗ್ರರ ಕೈ ಸೇರುವ ಬೆದರಿಕೆ ಇರುವುದರಿಂದ ಇಡಿಯ ಮನುಕುಲವೇ ನಾಶಗೊಳ್ಳುವ ಅಪಾಯವಿದೆ ಎಂದು ಜನರಲ್‌ ರಾವತ್‌ ಹೇಳಿದರು. 

ಪಾಕಿಸ್ಥಾನದ ವಿರುದ್ಧ ಪರೋಕ್ಷ ದಾಳಿ ಮಾಡಿದ ಜನರಲ್‌ ರಾವತ್‌, ಉಗ್ರ ಸಂಘಟನೆಯನ್ನು ಪ್ರವರ್ತಿಸುವ ದೇಶಗಳನ್ನು ಪ್ರತ್ಯೇಕಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. 

ಅತ್ಯಂತ ಸಕ್ರಿಯವಾಗಿರುವ ಉಗ್ರ ಇಂಟರ್‌ನೆಟ್‌ ಜಾಲವನ್ನು ಹತ್ತಿಕ್ಕುವ ನಿಟಿಟನಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ ಎಂದು ಸಾವತ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next