Advertisement

ಜಮ್ಮು-ಕಾಶ್ಮೀರ: ಸಿಆರ್ ಪಿಎಫ್ ಶಿಬಿರದ ಮೇಲೆ ಗ್ರೆನೇಡ್ ಎಸೆದ ಉಗ್ರರು

08:08 AM Apr 25, 2020 | Nagendra Trasi |

ಜಮ್ಮು-ಕಾಶ್ಮೀರ: ಸಿಆರ್ ಪಿಎಫ್ (ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್) ಶಿಬಿರದ ಮೇಲೆ ಉಗ್ರರು ಗ್ರೆನೇಡ್ ಎಸೆದ ಘಟನೆ ಶುಕ್ರವಾರ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಚಾದೂರಾದ ದೂನಿವಾರಿ ಪ್ರದೇಶದಲ್ಲಿ ಇದ್ದ ಶಿಬಿರದ ಮೇಲೆ ಮೋಟಾರ್ ಸೈಕಲ್ ನಲ್ಲಿ ಆಗಮಿಸಿದ್ದ ಉಗ್ರರು ಗ್ರೆನೇಡ್ ಎಸೆದು ಹೋಗಿರುವುದಾಗಿ ವಿವರಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ನಂತರ ಭದ್ರತಾ ಪಡೆ ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರನ್ನು ಸೆರೆಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಗ್ರೆನೇಡ್ ದಾಳಿಯಲ್ಲಿ ಸಿಆರ್ ಪಿಎಫ್ ನ ಯಾವುದೇ ಯೋಧರು ಗಾಯಗೊಂಡಿಲ್ಲ. ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರನ್ನು ಸೆರೆಹಿಡಿಯಲಾಗುವುದು ಎಂದು ಬುಡ್ಗಾಮ್ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next