Advertisement

ಶ್ರೀನಗರ ಆಸ್ಪತ್ರೆಯಲ್ಲಿ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ!

04:21 PM Nov 05, 2021 | Team Udayavani |

ಹೊಸದಿಲ್ಲಿ: ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಇಂದು ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದದೆ. ಆಸ್ಪತ್ರೆಯನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಯೋತ್ಪಾದಕರು ಮಾತ್ರ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

Advertisement

“ಬೆಮಿನಾದ ಸ್ಮಿಕ್ಸ್ ಆಸ್ಪತ್ರೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸ್ವಲ್ಪ ಸಮಯದ ಗುಂಡಿನ ಚಕಮಕಿ ನಡೆಯಿತು. ಭಯೋತ್ಪಾದಕರು ನಾಗರಿಕ ಉಪಸ್ಥಿತಿಯ ಲಾಭವನ್ನು ಪಡೆದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು” ಎಂದು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಒಬ್ಬ ವ್ಯಕ್ತಿಯು ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಎನ್ ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:ಟೀಕೆ ಮಾಡುವ ಕಾಂಗ್ರೆಸ್ ನವರು ಅಧಿಕಾರಲ್ಲಿರುವ ರಾಜ್ಯದಲ್ಲಿ ತೈಲ ಬೆಲೆ ಇಳಿಸಿಲ್ಲ: ಬೊಮ್ಮಾಯಿ

ಆರಂಭದಲ್ಲಿ, ಇದು ಆಕಸ್ಮಿಕ ಬೆಂಕಿಯ ಘಟನೆ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯಕೀಯ ಕಾಲೇಜು ಮತ್ತು ಅದರ ಹಾಸ್ಟೆಲ್‌ಗಳನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂದು ವರದಿ ಮಾಡಿದೆ.

Advertisement

ವಲಸೆ ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ನಡೆದ ನಾಗರಿಕ ಹತ್ಯೆಗಳ ನಂತರ ಇದು ಮೊದಲ ಪ್ರಮುಖ ಭಯೋತ್ಪಾದಕ ಘಟನೆಯಾಗಿದೆ. ಭಯೋತ್ಪಾದಕರ ಉದ್ದೇಶಿತ ದಾಳಿಯನ್ನು ತಡೆಯಲು ಶ್ರೀನಗರದಲ್ಲಿ ಹೆಚ್ಚುವರಿ 50 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next