Advertisement

ಬಗ್ದಾದಿ ಹತ್ಯೆ ಬೆನ್ನಲ್ಲೇ ಆತನ ಉತ್ತರಾಧಿಕಾರಿಯನ್ನೂ ಬೇಟೆಯಾಡಿದ ಅಮೆರಿಕಾ

10:08 AM Oct 30, 2019 | Hari Prasad |

ವಾಷಿಂಗ್ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿಯನ್ನು ಬೇಟೆಯಾಡಿದ ಬೆನ್ನಲ್ಲೇ ಆತನ ಸ್ಥಾನಕ್ಕೆ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದ್ದ ಉಗ್ರನನ್ನೂ ಸಹ ಅಮೆರಿಕಾ ಸೇನೆ ಕೊಂದು ಮುಗಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರದಂದು ಘೋಷಿಸಿದ್ದಾರೆ.

Advertisement

ಆದರೆ ಅಮೆರಿಕಾ ಪಡೆಗಳ ದಾಳಿಗೆ ಬಲಿಯಾದ ಆ ಟಾಪ್ 2 ಉಗ್ರನ ಹೆಸರನ್ನು ಮಾತ್ರ ಟ್ರಂಪ್ ಅವರು ಬಹಿರಂಗಪಡಿಸಲಿಲ್ಲ. ಆದರೆ ಈತ ಖಂಡಿತವಾಗಿಯೂ ಬಗ್ದಾದಿಯ ಉತ್ತರಾಧೀಕಾರಿಯೇ ಆಗಿದ್ದಿರಬೇಕು ಎಂಬ ಮಾಹಿತಿಯನ್ನು ಅಮೆರಿಕಾ ಬೆಹುಗಾರಿಕಾ ಅಧಿಕಾರಿಗಳು ನೀಡಿದ್ದಾರೆ.

ಸಿರಿಯಾದಲ್ಲಿ ಅಮೆರಿಕಾ ಪಡೆಗಳು ನಡೆಸಿದ ಯೋಜಿತ ದಾಳಿಯಲ್ಲಿ ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆಯ ಸ್ಥಾಪಕ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿ ಮೃತಪಟ್ಟಿರುವುದಾಗಿ ಡೊನಾಲ್ಡ್ ಟ್ರಂಪ್ ಅವರು ಆದಿತ್ಯವಾರದಂದು ಘೋಷಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next