Advertisement

ಸೇನೆಯ ಮಹತ್ವದ ಕಾರ್ಯಾಚರಣೆ: ಉಗ್ರನ ಸೆರೆ

11:57 AM May 06, 2020 | Hari Prasad |

ಹೊಸದಿಲ್ಲಿ: ಕಾಶ್ಮೀರದ ದೋಹಾ ಜಿಲ್ಲೆಯಲ್ಲಿ ಗುಂಡಾನಾ ತಾಲೂಕಿನಲ್ಲಿ ಭದ್ರತಾ ಪಡೆಗಳು ಮಂಗಳವಾರ ಮಹತ್ವದ ಕಾರ್ಯಾಚರಣೆ ನಡೆಸಿ, ತನ್ವೀರ್‌ ಅಹ್ಮದ್‌ ಮಲಿಕ್‌ ಎಂಬ ಭಯೋತ್ಪಾದಕನೊಬ್ಬನನ್ನು ಬಂಧಿಸಿದ್ದಾರೆ. ಆದರೆ, ಈತ ಯಾವ ಉಗ್ರ ಸಂಘಟನೆಗೆ ಸೇರಿದವನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Advertisement

ಮೇ 4ರಂದು ಹಂದ್ವಾರಾದ ಖ್ವಾಜಿಬಾದ್‌ನಲ್ಲಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅದರಲ್ಲಿ ಮೂವರು ಯೋಧರು ಸಾವನ್ನಪ್ಪಿದ್ದರು. ತತ್‌ ಕ್ಷಣವೇ ಸಂಚಾರವನ್ನು ನಿರ್ಬಂಧಿಸಿ ಶೋಧ ನಡೆಸಿ ಈ ಉಗ್ರನನ್ನು ಬಂಧಿಸಲಾಗಿದೆ.

ಗಡಿಯಲ್ಲಿ ತೀವ್ರ ತಪಾಸಣೆ: ಗಡಿ ನಿಯಂತ್ರಣ ರೇಖೆಯ ಆ ಬದಿಯಲ್ಲಿ ಅನೇಕ ಉಗ್ರರು ಒಳ ನುಸುಳಲು ತುದಿಗಾಲಲ್ಲಿ ನಿಂತಿರುವ ಬಗ್ಗೆ ಗುಪ್ತಚರ ಮಾಹಿತಿಗಳು ಲಭ್ಯವಾಗಿವೆ. ಹಾಗಾಗಿ, ತೀವ್ರ ಹುಡುಕಾಟಕ್ಕೆ ನಿರ್ಧರಿಸಲಾಗಿದೆ ಎಂದು ಸೇನೆ ಹೇಳಿದೆ.

ಅಶುತೋಷ್‌ ಅಂತ್ಯಕ್ರಿಯೆ
ಹಂದ್ವಾರಾದಲ್ಲಿ ಮೇ 2ರಂದು ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಮೃತರಾಗಿದ್ದ 21 ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಕರ್ನಲ್‌ ಅಶುತೋಷ್‌ ಶರ್ಮಾರವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.

ಅವರ ಪಾರ್ಥಿವ ಶರೀರವನ್ನು ಜೈಪುರಕ್ಕೆ ತರಲಾಯಿತು. ವಿಮಾನ ನಿಲ್ದಾಣದಲ್ಲಿ ರಾಜಸ್ಥಾನದ ಸಚಿವ ಪ್ರತಾಪ್‌ ಖಚ್ವಿಯವಾಸ್‌ ಅವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಸುಮಾರು 10 ಸೇನಾ ವಾಹನಗಳು ಈ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದವು.

Advertisement

ಜೈಪುರದ ಮಿಲಿಟರಿ ಸ್ಟೇಷನ್‌ನಲ್ಲಿ ಅವರ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಕಲ ಸೇನಾ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಸೇನಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next