Advertisement

ಎರಡೂವರೆ ಜಿಲ್ಲೆಗಳಿಗೆ ಸೀಮಿತವಾದ ಭಯೋತ್ಪಾದನೆ

06:41 AM Apr 19, 2019 | Team Udayavani |

ನಾವು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ ಎಂಬುದು ಕೇವಲ ಜಮ್ಮು-ಕಾಶ್ಮೀರದ ಎರಡೂವರೆ ಜಿಲ್ಲೆಗಳಿಗೆ ಸೀಮಿತವಾಗಿದೆ. ಕಳೆದ 5 ವರ್ಷಗಳಲ್ಲಿ ದೇಶದ ಬೇರೆ ಯಾವುದೇ ಭಾಗದಲ್ಲೂ ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಗುಜರಾತ್‌ನ ಅಮ್ರೇಲಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಶ್ಮೀರ ಸಮಸ್ಯೆ ಇತ್ಯರ್ಥವಾಗದೇ ಇರಲು ಕಾಂಗ್ರೆಸ್‌ ನೇತೃತ್ವದ ಸರಕಾರಗಳ ನೀತಿಯೇ ಕಾರಣ ಎಂದೂ ಆರೋಪಿಸಿದ್ದಾರೆ. ಇದೇ ವೇಳೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಬಗ್ಗೆ ಪ್ರಸ್ತಾಪಿಸಿದ ಅವರು, “ನಾನು ಗುಜರಾತ್‌ನಲ್ಲಿ ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಿಸಿರುವುದು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ಉಪೇಕ್ಷಿಸಲು ಅಲ್ಲ. ಕಾಂಗ್ರೆಸ್‌ನವರು ಪಟೇಲ್‌ರನ್ನು ತಮ್ಮ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಯಾವೊಬ್ಬ ಕಾಂಗ್ರೆಸ್‌ ನಾಯಕನೂ ಸರ್ದಾರ್‌ ಪಟೇಲ್‌ರ ಪ್ರತಿಮೆಯನ್ನು ವೀಕ್ಷಿಸಲು ಇಲ್ಲಿಗೆ ಬಂದಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಗೂಗಲ್‌ನಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆ ಯಾವುದು ಎಂದು ಹುಡುಕುವಾಗ ಗುಜರಾತ್‌ನ ಹೆಸರು ಬರುವುದನ್ನು ನೋಡಿ ನಿಮಗೆ ಹೆಮ್ಮೆಯಾಗುವುದಿಲ್ಲವೇ ಎಂದೂ ಗುಜರಾತಿಗರನ್ನು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next