ನವದೆಹಲಿ: ಪಾಕಿಸ್ತಾನದ ಉಗ್ರ ಸಂಘಟನೆಗಳು ಹಾಗೂ ಅವುಗಳನ್ನು ನಿರ್ವಹಿಸುತ್ತಿರುವವರು ವಾಟ್ಸಾಪ್ ಮತ್ತು ಫೇಸ್ ಬುಕ್ ಬಳಕೆಯನ್ನು ನಿಲ್ಲಿಸಿ, ಹೊಸ ಮೆಸೇಜಿಂಗ್ ಅಪ್ಲಿಕೇಶನ್ ನ ಮೊರೆ ಹೋಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಆ್ಯಪ್ ಜಗತ್ತಿನಾದ್ಯಂತ ಉಚಿತವಾಗಿ ದೊರಕುತ್ತಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಹೊಸ ಭದ್ರತಾ ನೀತಿಗಳನ್ನು ಪರಿಚಯಿಸುತ್ತಿರುವ ಬೆನ್ನಲ್ಲೆ, ಈ ಬೆಳವಣಿಗೆ ನಡೆದಿದ್ದು, ಟರ್ಕೀಶ್ ಮೂಲದ ಕಂಪೆನಿಯೊಂದು ಸಿದ್ದಪಡಿಸಿದ ಹೊಸ ಅಪ್ಲಿಕೇಶನ್ ನತ್ತ ಉಗ್ರರು ಹೊರಳಿದ್ದಾರೆಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಹಲವು ಉಗ್ರರರನ್ನು ಎನ್ ಕೌಂಟರ್ ಮೂಲಕ ಸದೆಬಡಿದ ನಂತರ ಹಾಗೂ ಕೆಲ ಉಗ್ರರು ಶರಣಾದ ಬಳಿಕ ಈ ಮಾಹಿತಿ ತಿಳಿದುಬಂದಿದ್ದು, ಪಾಕ್ ಉಗ್ರರು ಮೂರು ಹೊಸ ಅಪ್ಲಿಕೇಶನ್ ಗಳ ಮುಖಾಂತರ ಮಾಹಿತಿ ರವಾನಿಸಲು ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳು ಸಂಗ್ರಹಿಸಿದ್ದ ಹುಂಡಿಯನ್ನು ಶ್ರೀರಾಮ ಮಂದಿರ ನಿಧಿಗೆ ಸಮರ್ಪಣೆ
ಭದ್ರತಾ ಕಾರಣಗಳಿಂದ ಈ ಮೂರು ಅಪ್ಲಿಕೇಶನ್ ಗಳ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಒಂದು ಅಮೆರಿಕ ಮೂಲದ ಕಂಪೆನಿಯಾಗಿದೆ. ಮತ್ತೊಂದು ಯೂರೋಪ್ ಹಾಗೂ ಇತ್ತೀಚಿಗೆ ಬಳಕೆಯಲ್ಲಿರುವುದು ಟರ್ಕೀಶ್ ಮೂಲದ ಕಂಪೆನಿ ಸಿದ್ದಪಡಿಸಿದ ಅಪ್ಲಿಕೇಶನ್ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಅಪ್ಲಿಕೇಶನ್ ಅತೀ ಕಡಿಮೆ ಇಂಟರ್ ನೆಟ್ ಕನೆಕ್ಷನ್ ಹೊಂದಿದ್ದರೂ ಕಾರ್ಯನಿರ್ವಹಿಸುವ ಸಾಮಾರ್ಥ್ಯ ಪಡೆದಿದೆ. ಭಾರತ ಸರ್ಕಾರ ಆಗಸ್ಟ್ 2019ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. 2020ರಲ್ಲಿ2ಜಿ ಇಂಟರ್ ನೆಟ್ ಸೇವೆ ಆರಂಭಿಸಿತ್ತು. ಪರಿಣಾಮವಾಗಿ ಉಗ್ರ ಸಂಘಟನೆಗಳೂ ಕೂಡ ಹೊಸ ಅಪ್ಲಿಕೇಶನ್ ನತ್ತ ಮುಖಮಾಡಿ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ಇನ್ನೂ 5 ವರ್ಷ ಅಧಿಕಾರಕ್ಕೆ ಬಂದರೇ, ಅಸ್ಸಾಂ ಭದ್ರವಾಗುತ್ತದೆ : ಶಾ