Advertisement

ಭಯೋತ್ಪಾದಕರಿಂದ 14 ಭದ್ರತಾ ಸಿಬ್ಬಂದಿಯ ಹತ್ಯೆ

09:55 AM Dec 28, 2019 | keerthan |

ನೈಜರ್: ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ 14 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನೈಯಮೇಯಲ್ಲಿ ನಡೆದಿದೆ.

Advertisement

ಪಶ್ಚಿಮ ಆಫ್ರಿಕಾದ ದೇಶ ನೈಜರ್ ನ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.

ಬುಧವಾರ ಭದ್ರತಾ ಪಡೆಗಳು ಎಸ್ಕಾರ್ಟ್ ಮಾಡುತ್ತಿದ್ದ ವೇಳೆ ಈ ದಾಳಿಯಾಗಿದೆ. 14 ಭದ್ರತಾ ಪಡೆ ಸಿಬ್ಬಂದಿಗಳೊಂದಿಗೆ ಇತರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ದಾಳಿಯ ನಂತರ ಓರ್ವ ಗಾರ್ಡ್ ನಾಪತ್ತೆಯಾಗಿದ್ದಾನೆ ಎಂದು ಸಚಿವ ಮೊಹಮ್ಮದ್ ಬಾಜೌನ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next