Advertisement

ಉಗ್ರರ ಸಂಚು ವಿಫಲ: 7 ಕೆಜಿ ಐಇಡಿ ಸ್ಪೋಟಕ ವಶ; ಇಬ್ಬರನ್ನು ಬಂಧಿಸಿದ ಪೊಲೀಸರು

08:21 PM Feb 14, 2021 | Team Udayavani |

ಜಮ್ಮುಕಾಶ್ಮೀರ: ಪುಲ್ವಾಮ ಭೀಕರ ದಾಳಿ ನಡೆದು ಎರಡು ವರ್ಷವಾದ ವೇಳೆಯಲ್ಲಿಯೇ ಜಮ್ಮುವಿನಲ್ಲಿ ಉಗ್ರರು, ವಿದ್ವಾಂಸಕ ಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಜಮ್ಮು ಬಸ್ ನಿಲ್ದಾಣದಲ್ಲಿ 7ಕೆ.ಜಿ ಗಳಷ್ಟು  ಸುಧಾರಿತ ಐಇಡಿ ಸ್ಪೋಟಕಗಳನ್ನಿರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

Advertisement

ಬಂಧಿತರನ್ನು ಚಂಢಿಗಢದ ನರ್ಸಿಂಗ್ ವಿದ್ಯಾರ್ಥಿ ಸುಹೈಲ್ ಹಾಗೂ ಖಾಜಿ ಎಂದು ಗುರುತಿಸಲಾಗಿದೆ ಎಂದು ಜಮ್ಮು ಕಾ‍ಶ್ಮೀರ  ಐಜಿ ಮುಖೇಶ್ ಸಿಂಗ್ ತಿಳಿಸಿದ್ದಾರೆ.

ರಘುನಾಥ್ ದೇವಾಲಯ, ಲಾಖ್ ದತ್ತಾ ಬಜಾರ್, ಜಮ್ಮು ರೈಲ್ವೇ ಸ್ಟೇಷನ್ ಉಗ್ರರ ಹಿಟ್ ಲೀಸ್ಟ್ ನಲ್ಲಿದ್ದು, ಪಾಕಿಸ್ತಾನವು ಉಗ್ರ ಚಟುವಟಿಕೆ ನಡೆಸಲು ಅಲ್ ಬದ್ರ್ ಸೇರಿದಂತೆ ಪಂಜಾಬ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಕಾಶ್ಮೀರ ವಿದ್ಯಾರ್ಥಿಗಳನ್ನು ಕೃತ್ಯಕ್ಕೆ ಬಳಸಲು ಸಂಚು ರೂಪಿಸುತ್ತಿದೆ ಎಂದು ಜಮ್ಮು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.

ಇದನ್ನೂ ಓದಿ:  ಉತ್ತರಾಖಂಡ ದುರಂತ: ಕಂದಮ್ಮಗಳ ಹುಡುಕಾಟದಲ್ಲಿರುವ ತಾಯಿ ಕರುಳಿನ ವ್ಯಥೆ

Advertisement

ಪುಲ್ವಾಮ ದಾಳಿ ನಡೆದ ದಿನದಂದೇ ವಿದ್ವಾಂಸಕ ಕೃತ್ಯ ನಡೆಸಲು ಉಗ್ರರು ಯೋಜನೆ ರೂಪಿಸಿದ್ದಾರೆ ಎನ್ನುವ ಗುಪ್ತಚರ ಮಾಹಿತಿ ಅನ್ವಯ ಕಳೆದ ಮೂರು ದಿನಗಳಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಐಇಡಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಪಾಕಿಸ್ತಾನದ ಅಲ್ ಬದ್ರ್ ತಂಝೀಮ್ ಭಯೋತ್ಪಾದಕ ಸಂಘಟನೆ ಐಇಡಿ ಸ್ಪೋಟಕಗಳನ್ನೀರಿಸಲು ಸೂಚನೆ ನೀಡಿತ್ತು ಎಂದು ಆರೋಪಿಗಳು  ತಿಳಿಸಿದ್ದಾರೆ.

ಸಂಭಾ ಜಿಲ್ಲೆಯಲ್ಲೂ ಪೊಲೀಸರು 15 ಸಣ್ಣ ಪ್ರಮಾಣದ ಐಇಡಿ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸ್ಪೋಟಕಗಳನ್ನು ಡ್ರೋನ್ ಮೂಲಕ ಕೆಳಗಿಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:  ‘ಪಠಾಣ್’ ಚಿತ್ರದಲ್ಲಿ ಭಾಯ್ ಜಾನ್…. ಶಾರುಖ್ ಗೆ ಸಾಥ್ ನೀಡಿದ ಸಲ್ಮಾನ್

Advertisement

Udayavani is now on Telegram. Click here to join our channel and stay updated with the latest news.

Next