ನವದೆಹಲಿ: ರಷ್ಯಾದ ಚಾರ್ಟರ್ ವಿಮಾನ ಸಂಚರಿಸುತ್ತಿರುವಾಗಲೇ ಹಿಂಬದಿಯ ಬಾಗಿಲು ಓಪನ್ ಆದ ಆಘಾತಕಾರಿ ನಡೆದಿದೆ. ಬಾಗಿಲು ತೆರೆಯುತ್ತಿದ್ದಂತೆಯೇ ರಭಸವಾಗಿ ನುಗ್ಗಿದ ಗಾಳಿಯು ಪ್ರಯಾಣಿಕರ ಲಗೇಜ್‌ಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಸರಂಜಾಮುಗಳೆಲ್ಲ ಆಗಸದಲ್ಲಿ ಕಣ್ಮರೆಯಾದವು.
ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇರ್‌ಏರೋ ಸಂಸ್ಥೆಗೆ ಸೇರಿದ ವಿಮಾನವು ಮೈನಸ್ 41 ಡಿ.ಸೆ. ತಾಪಮಾನವಿದ್ದ ಸೈಬೀರಿಯಾದ ಮೇಗನ್ ನಗರದಿಂದ ಟೇಕ್ ಆಫ್ ಆಗಿತ್ತು. 6 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಇದರಲ್ಲಿ ಪ್ರಯಾಣಿಸುತ್ತಿದ್ದರು.
ಟೇಕಾಫ್ ಆಗುತ್ತಿದ್ದಂತೆಯೇ ಏಕಾಏಕಿ ಹಿಂಬದಿಯ ಡೋರ್ ಓಪನ್ ಆಗಿದೆ. ತಕ್ಷಣವೇ ಗಾಳಿಯು ಲಗೇಟ್‌ಗಳನ್ನು ತನ್ನತ್ತ ಸೆಳೆದುಕೊಂಡಿದೆ. ಅಷ್ಟರಲ್ಲೇ ಎಚ್ಚೆತ್ತುಕೊಂಡ ಸಿಬ್ಬಂದಿ, ವಿಮಾನದೊಳಗೆ ಗಾಳಿಯ ಒತ್ತಡವನ್ನು ಮರುಪೂರಣಗೊಳಿಸಿ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ.
ಇದನ್ನೂ ಓದಿ: ಗುಂಡ್ಲುಪೇಟೆ: ರೈತರ ಜಮೀನಿಗೆ ದಾಳಿ ಮಾಡಿ ಆಸ್ತಿ ಪಾಸ್ತಿ ಹಾಳು ಮಾಡುತ್ತಿದ್ದ ಪುಂಡಾನೆ ಸೆರೆ