Advertisement
ತಾಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆನೇಕಲ್ ಉಪ ವಿಭಾಗದ ಎಲ್ಲ ಠಾಣೆಗಳಲ್ಲಿನ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಿಂ ದಲೇ ಬೈಕ್, ಮೊಬೈಲ್, ಚೈನ್ ಕಳ್ಳರನ್ನು ಬಂಧಿಸಿದ್ದಾರೆ. ಇವತ್ತು ಪ್ರಮುಖವಾಗಿ ಮೂರು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದರು.
Related Articles
Advertisement
ಕುಖ್ಯಾತನ ಕಳ್ಳರ ಬಂಧನ: ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಹಲವು ಕಡೆಗಳಲ್ಲಿ ಬೈಕ್ ಗಳನ್ನು ಕದ್ದು, ನಂಬರ ಪ್ಲೇಟ್‌ಗಳನ್ನು ಬದಲಾಯಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರಿಂದ 10 ಲಕ್ಷ ರೂ. ಮೌಲ್ಯದ 11 ಬೈಕ್ ಮತ್ತು 18 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:- ತೆಂಗಿನಕಾಯಿ ಹರಾಜು ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ಮನವಿ
ಆರೋಪಿಗಳಾದ ಅಜಯ್, ಮಂಜುನಾಥ, ಶಿವಕುಮಾರ್, ಇವರು ಹಲವು ವರ್ಷಗಳಿಂದ ಇದೇ ಕೆಲಸ ಮಾಡಿ ಕೊಂಡು ಪೊಲೀಸರಿಗೆ ಯಾವುದೇ ಸುಳಿವು ಸಿಗದ ರೀತಿಯಲ್ಲಿ ತಲೆಮರಿಸಿಕೊಂಡು ಓಡಾಡಿ ಕೊಂಡಿದ್ದರು. ಇತ್ತಿಚೆಗೆ ಬನ್ನೇರುಘಟ್ಟ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದರು ಎಂದು ತಿಳಿಸಿದ್ದಾರೆ.
ಬಹುಮಾನ: ನಾಲ್ಕು ವರ್ಷಗಳಿಂದ ಬೈಕ್‌ಗಳನ್ನು ಕಳ್ಳತನ ಮಾಡಿ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳರನ್ನು ಜಿಗಣಿ ಮತ್ತು ಬನ್ನೇರುಘಟ್ಟ ಪೊಲೀಸರು ಬಂಧಿಸಿ ಅವರಿಂದ ದೊಡ್ಡ ಮಟ್ಟದಲ್ಲಿ ಬೈಕ್‌ಗಳನ್ನು ವಶ ಪಡಿಸಿಕೊಂಡು ಜನರಲ್ಲಿ ಪೊಲೀಸರ ಸೇವೆ ಬಗ್ಗೆ ಪ್ರಶಂಸೆಗೆ ಕಾರಣರಾಗಿರುವುದರಿಂದ ಬೈಕ ಕಳ್ಳರನ್ನು ಬಂಧಿಸಲು ಕಾರಣರಾದ ಜಿಗಣಿ ಪೊಲೀಸ್ ಠಾಣೆಯ ಪೊಲೀಸ್ ಹಾಗೂ ಬನ್ನೇರುಘಟ್ಟ ಠಾಣೆ ಸಿಬ್ಬಂದಿ ತಂಡಕ್ಕೆ ಸೇರಿ ಒಟ್ಟು 25 ಸಾವಿರ ರೂ. ನಗದು ಬಹುಮಾನವಾಗಿ ನೀಡಲಾಯಿತು.
32 ಪ್ರಕಣರ ಪತ್ತೆ: ಜಿಗಣಿ ಪೊಲೀಸ್ ಠಾಣೆಯ 18, ಬನ್ನೇರುಘಟ್ಟ ಠಾಣೆಯ 3, ಆನೇಕಲ್ ಪೊಲೀಸ್ ಠಾಣೆಯ 1 ಸೇರಿದಂತೆ ಬೆಂಗಳೂರುನಗರ ವಿವಿಧ ಠಾಣೆಗಳ 32 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಮ್ಮ ಸಿಬ್ಬಂದಿ ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.
ಬೈಕ್ ಪ್ರಕರಣ ಹೆಚ್ಚು: ಈ ವಿಭಾಗದ ಸೂರ್ಯನಗರ, ಹೆಬ್ಬಗೋಡಿ, ಚಂದಾಪುರ ಭಾಗಗಲ್ಲಿ ಎರಡು ದಿನಗಳಿಗೊಮ್ಮೆ ಬೈಕ್ ಕಳ್ಳತನ ವರದಿಯಾಗುತ್ತಿದೆ. ಆದರೂ ನಮ್ಮ ಅಪರಾಧ ತಂಡ ಕಾರ್ಯಾಚಣೆಯಲ್ಲಿ ತೊಡಗಿದೆ. ಎಲ್ಲ ಬೈಕ್ ಕಳವು ಪ್ರಕರಣಗಳನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದರು. ಬೆಂಗಳೂರು ನಗರ ಗ್ರಾಮಾಂತರ ಜಿಲ್ಲಾ ಪೊಲೀಸ್ ನ ಅಪರಾಧ ವಿಭಾಗದ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್, ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಲ್ಲೇಶ್, ಅತ್ತಿಬೆಲೆ ವೃತ್ತ ನಿರೀಕ್ಷಕರ ವಿಶ್ವನಾಥ್, ಅನೇಕಲ್ ವೃತ್ತ ನಿರೀಕ್ಷಕ ಮಹಾನಂದ, ಜಿಗಣಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುದರ್ಶನ್ ಎಚ್.ವಿ, ಸಬ್ ಇನ್ಸ್‌ಪೆಕ್ಟರ್, ಶಿವಲಿಂಗನಾಯ್ಕ ಇದ್ದರು.
ಜನರ ಬಳಿಗೆ ಪೊಲೀಸ್
ಅಪರಾಧ ತಡಗೆ ಪುಟ್ ಪ್ಯಾಟ್ರೊಲಿಂಗ್ ಆರಂಭಿಸಿದ್ದೇವೆ. ಪ್ರತಿ ಠಾಣೆಗಳಿಂದ ನಾಲ್ಕು ಐದು ಪೊಲೀಸರು ಮೊದಲೇ ಗುರುತಿಸಿರುವ ಖಾಲಿ ಬಡಾವಣೆ, ಪ್ರಮುಖ ವೃತ್ತಗಳಲ್ಲಿ, ವೈನ್‌ಶಾಪ್ ಗಳ ಬಳಿ ತೆರಳಿ ಅಲ್ಲಿನ ನಾಗರಿಕರ ಬಳಿ ಅಪರಾಧ ಕೃತ್ಯ ನಡೆಸುವವರ ಬಗ್ಗೆ ಮಾಹಿತಿ ಕಳೆ ಹಾಕಿ, ಯಾರಾದರೂ ಅನುಮಾನಸ್ಪದವಾಗಿ ಕಂಡರೆ ಅವರ ಬಗ್ಗೆ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿ ಪೊಲೀಸರು ಸದಾ ನಿಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸ ಮೂಡಿಸಲಿದ್ದಾರೆ ಎಂದು ಎಸ್ಪಿ ತಿಳಿಸಿದರು.