Advertisement
ಮೃತರು ಶ್ರೀನಿಧಿ ಅಸ್ರಣ್ಣ(21) ಮತ್ತು ಪ್ರಜ್ವಲ್(20)ಎನ್ನುವವರಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಇವರು ಇನ್ನಿಬ್ಬರು ಸ್ನೇಹಿತರೊಂದಿಗೆ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
Related Articles
Advertisement
ಪ್ರಜ್ವಲ್ ತಮ್ಮನನ್ನು ತುಮಕೂರಿಗೆ ಬಿಟ್ಟು ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ.ನಾಲ್ವರಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿಯಾಗಿ ಬಳಿಕ ಸರಕಾರಿ ಬಸ್‌ಗೆ ಢಿಕ್ಕಿಯಾಗಿ ಸಂಪೂರ್ಣ ನಜ್ಜುಗುಜ್ಜಾ ಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕಾರಿನಲ್ಲಿದ್ದ ಶರತ್ ಭಂಡಾರಿ ಮತ್ತು ಶರತ್ ಉಡುಪ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕಟೀಲಿನಲ್ಲಿ ವಿಚಾರ ತಿಳಿದು ನೀರವ ಮೌನ ಆವರಿಸಿದ್ದು, ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.