Advertisement

Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್‌!

02:38 AM Oct 18, 2024 | Team Udayavani |

ಹೊಸದಿಲ್ಲಿ: ಜಾಗತಿಕವಾಗಿ ಟೆಕ್‌ ಸಂಸ್ಥೆಗಳು ವ್ಯಾಪಕ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸಾಮಾಜಿಕ ಮಾಧ್ಯಮ ದಿಗ್ಗಜ ಮೆಟಾ, ತನ್ನ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದನ್ನು ದೃಢಪಡಿಸಿದೆ.

Advertisement

ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಮೆಟಾ ವಕ್ತಾರ ಡೇವ್‌ ಅರ್ನಾಲ್ಡ್‌, “ದೀರ್ಘ‌ ಕಾಲೀನ ಕಾರ್ಯತಂತ್ರದ ಭಾಗವಾಗಿ ಮೆಟಾ ಕೆಲ ಬದಲಾವ ಣೆಗಳನ್ನು ತರಲಿದೆ. ಹೀಗಾಗಿ, ಕೆಲವರನ್ನು ವರ್ಗಾಯಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

2022ರಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೆಟಾ, 2023ರಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ನಡುವೆ, ಐ.ಟಿ. ಸಂಸ್ಥೆ ಇಂಟೆಲ್‌ ಅಮೆರಿಕದ ಅರಿಜೋನಾ, ಕ್ಯಾಲಿಪೋರ್ನಿಯಾ ಮತ್ತು ಟೆಕ್ಸಸ್‌ನಿಂದ 2 ಸಾವಿರ ಮಂದಿಯನ್ನು ವಜಾ ಮಾಡುವ ಬಗ್ಗೆ ಘೋಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next