Advertisement

ಟೆನ್ನಿಸ್‌ ವಾಲಿಬಾಲ್‌, ಜಂಪ್‌ ರೋಪ್‌ ಪಂದ್ಯಾಟ

12:27 PM Nov 18, 2017 | Team Udayavani |

ಸುಂಕದಕಟ್ಟೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ದ.ಕ. ಮತ್ತು ಶ್ರೀ ನಿರಂಜನ ಸ್ವಾಮಿಪದವಿ ಪೂರ್ವ ಕಾಲೇಜು, ಸುಂಕದಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್‌ ವಾಲಿಬಾಲ್‌ ಮತ್ತು ಜಂಪ್‌ ರೋಪ್‌ ಪಂದ್ಯಾಟ ಸುಂಕದಕಟ್ಟೆ ಪದವಿ ಕಾಲೇಜಿನಲ್ಲಿ ಜರಗಿತು.

Advertisement

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಮುಖ್ಯ ಪ್ರಬಂಧಕ ರತ್ನಾಕರ ಶೆಟ್ಟಿ ಉದ್ಘಾಟಿಸಿ, ಕ್ರೀಡೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಸೋಲು ಗೆಲುವುಗಳು ಜೀವನಕ್ಕೆ ಪೂರಕವಾಗಿರುತ್ತದೆ. ಗುರಿ ಮುಟ್ಟುವಲ್ಲಿ ಛಲ, ಧೈರ್ಯ ಮತ್ತು ನಂಬಿಕೆ ಅಗತ್ಯ ಎಂದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣ ಕ್ರೀಡಾ ಸಂಯೋಜಕ ಪ್ರೇಮನಾಥ್‌ ಶೆಟ್ಟಿ, ಟೆನ್ನಿಸ್‌ ವಾಲಿಬಾಲ್‌ ಮತ್ತು ಜಂಪ್‌ ರೋಪ್‌ ಮುಂತಾದ ಹೊಸ ಕ್ರೀಡೆಗಳ ಪ್ರಾಮುಖ್ಯತೆ ಮತ್ತು ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಹೇಳಿದರು.

ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಅಲ್ವಿನ್‌ ಮಿರಾಂಡ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಹೆಗ್ಡೆ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಅಹಲ್ಯಾ ಕೆ. ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಉಪನ್ಯಾಸಕ ಸುಧಾಕರ್‌ ಶೆಟ್ಟಿ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ನವೀನ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next