Advertisement

ಟೆನ್ನಿಸ್‌ ವಾಲಿಬಾಲ್‌: ಅದಿತಿ ಸಾಲ್ಯಾನ್‌ಗೆ ಚಿನ್ನ

04:30 PM Jun 27, 2017 | Team Udayavani |

ಮುಂಬಯಿ: ಚೆಂಬೂರು ತಿಲಕ್‌ ನಗರದ ನಿವಾಸಿ ಕು| ಅದಿತಿ ಸತೀಶ್‌ ಸಾಲ್ಯಾನ್‌ ಅವರು  ನೇಪಾಳದ ಕಾಠು¾ಂಡುವಿನಲ್ಲಿ ಇತ್ತೀಚೆಗೆ ನಡೆದ  ಅಂತಾರಾಷ್ಟ್ರೀಯ ಆಟವಾದ ಟೆನ್ನಿಸ್‌ ವಾಲಿಬಾಲ್‌ ಪಂದ್ಯಾಟದಲ್ಲಿ ಭಾರತವು  ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮೂಲತಃ  ಉಡುಪಿ ಜಿಲ್ಲೆಯ  ಹೆಜಮಾಡಿ ಮೂಲದ ಬಿಲ್ಲವರ ಸಮುದಾಯದ ಸತೀಶ್‌ ಕೆ. ಸಾಲ್ಯಾನ್‌ ಮತ್ತು ಸುರೇಖಾ ಸಾಲ್ಯಾನ್‌ ದಂಪತಿ ಪುತ್ರಿಯಾಗಿರುವ ಇವರು ಸತತ ಮೂರು ಬಾರಿ ಅಂತಾರಾಷ್ಟ್ರೀಯ  ಸ್ಪರ್ಧೆಯಲ್ಲಿ ಮುಂಬಯಿಗೆ 2ನೇ ಸ್ಥಾನವನ್ನು ಗಿಟ್ಟಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅದಿತಿ ಅವರು ಮುಂಬಯಿಯಲ್ಲಿ ವಾಣಿಜ್ಯ ವಿಭಾಗದ ಪ್ರಥಮ ಪದವಿ ವಿದ್ಯಾರ್ಥಿನಿಯಾಗಿದ್ದು, ತನ್ನ ಸತತ ಪ್ರಯತ್ನದಿಂದ  ಮತ್ತು ಅಪಾರ ಸಾಧನೆಯಿಂದ ಭಾರತಕ್ಕೆ ಚಿನ್ನದ ಪದಕ ತರುವಲ್ಲಿ  ಯಶಸ್ವಿಯಾಗಿದ್ದಾರೆ. ಭಾರತ ತಂಡವು ನೇಪಾಳ, ಭೂತನ್‌, ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳ‌ನ್ನು ಸೋಲಿಸಿ ಅಂತಿಮ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next