Advertisement

Tennis; ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದ ಸುಮಿತ್‌ ನಾಗಲ್‌

12:15 AM Aug 20, 2024 | Team Udayavani |

ವಿನ್‌ಸ್ಟನ್‌ ಸಲೇಮ್‌ (ನಾರ್ತ್‌ ಕ್ಯಾಲಿಫೋರ್ನಿಯಾ): ಭಾರತದ ಸುಮಿತ್‌ ನಾಗಲ್‌ “ವಿನ್‌ಸ್ಟನ್‌ ಸಲೇಮ್‌ ಓಪನ್‌ ಎಟಿಪಿ-250′ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದಿದ್ದಾರೆ. ಕ್ರೊವೇಶಿಯಾದ ಬೋರ್ನ ಕೊರಿಕ್‌ ವಿರುದ್ಧದ ಪಂದ್ಯವನ್ನು ಸುಮಿತ್‌ 4-6, 2-6ರಿಂದ ಕಳೆದುಕೊಂಡರು.

Advertisement

ಡಬಲ್ಸ್‌ನಲ್ಲಿ ಮಾಜಿ ಜೂನಿಯರ್‌ ನ್ಯಾಶನಲ್‌ ಚಾಂಪಿಯನ್‌ ದಕ್ಷಿಣೇಶ್ವರ್‌ ಸುರೇಶ್‌ ಬ್ರಿಟನ್‌ನ ಲೂಕಾ ಪೌ ಜತೆಗೂಡಿ ಆಡಲಿದ್ದಾರೆ. ಸುರೇಶ್‌ ಸಿಂಗಲ್ಸ್‌ನಲ್ಲಿ ಅರ್ಹತೆ ಸಂಪಾದಿಸಲು ವಿಫ‌ಲರಾಗಿದ್ದರು. ದ್ವಿತೀಯ ಸುತ್ತಿನ ಅರ್ಹತಾ ಪಂದ್ಯದಲ್ಲಿ ಅವರು ಅಮೆರಿಕದ ಲರ್ನರ್‌ ಟೀನ್‌ ವಿರುದ್ಧ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next