ಮ್ಯಾಡ್ರಿಡ್: ವಿಶ್ವ ಟೆನಿಸ್ ಶ್ರೇಯಾಂಕ ಪ್ರಕಟವಾಗಿದ್ದು ಪುರುಷರ ಎಟಿಪಿ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ 8,770 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮಹಿಳಾ ವಿಭಾಗದ ಡಬ್ಲೂéಟಿಎ ಶ್ರೇಯಾಂಕದಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್ 8, 140 ಅಂಕದೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಎಟಿಪಿ ಶ್ರೇಯಾಂಕದಲ್ಲಿ 8,670 ಅಂಕಗಳೊಂದಿಗೆ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 2ನೇ ಸ್ಥಾನ, ಕ್ರೊವೇಶಿಯಾದ ಮರಿನ್ ಸಿಲಿಕ್ (4,985 ) 3ನೇ ಸ್ಥಾನದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ 6,790 ಅಂಕದೊಂದಿಗೆ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಸ್ನಿಕಿ 2ನೇ ಸ್ಥಾನ, 6,065 ಅಂಕದೊಂದಿಗೆ ಸ್ಪೇನ್‌ನ ಗಾರ್ಬಿನೆ ಮುಗುರುಜಾ ತೃತೀಯ ಸ್ಥಾನದಲ್ಲಿದ್ದಾರೆ.
2 ವರ್ಷದ ಬಳಿಕ ಅಗ್ರ 100ರ ಒಳಕ್ಕೆ ಯೂಕಿ
ಎಟಿಪಿ ಶ್ರೇಯಾಂಕದಲ್ಲಿ ಬರೋಬ್ಬರಿ 2 ವರ್ಷದ ಬಳಿಕ ಭಾರತದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಅಗ್ರ ನೂರರ ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಅವರು 83ನೇ ಶ್ರೇಯಾಂಕದಲ್ಲಿದ್ದಾರೆ. ಒಟ್ಟಾರೆ ಅವರು 22 ಸ್ಥಾನ ಹಾರಿರುವುದು ವಿಶೇಷ. ಇದು ಇವರ ಜೀವನಶ್ರೇಷ್ಠ ಶ್ರೇಯಾಂಕವಾಗಿದೆ.