ಆದರೆ ಭಾರತ ತನ್ನ ಅತ್ಯುತ್ತಮ ಸಿಂಗಲ್ಸ್ ಹಾಗೂ ಡಬಲ್ಸ್ ಆಟಗಾರರ ಅನುಪಸ್ಥಿತಿಯಲ್ಲಿ ಸ್ಟಾಕ್‌ಹೋಮ್‌ಗೆ ಬಂದಿಳಿದಿದೆ. ಸುಮಿತ್ ನಾಗಲ್ ಮತ್ತು ಯೂಕಿ ಭಾಂಬ್ರಿ ಇಲ್ಲಿ ಆಡದಿರುವುದು ಭಾರತಕ್ಕೊಂದು ಹಿನ್ನಡೆ. ಹೀಗಾಗಿ ಡಬಲ್ಸ್ ಆಟಗಾರ ಎನ್. ಶ್ರೀರಾಮ್ ಬಾಲಾಜಿ ಸತತ 2ನೇ ಸಲ ಸಿಂಗಲ್ಸ್ ಹೋರಾಟಕ್ಕೆ ಅಣಿಯಾಗಬೇಕಿದೆ. ಪಾಕಿಸ್ಥಾನ ವಿರುದ್ಧ ಮೊದಲ ಸಲ ಸಿಂಗಲ್ಸ್ ಆಡಿದ್ದ ಬಾಲಾಜಿ, ಶನಿವಾರ ಸ್ವೀಡನ್‌ನ ನಂ.1 ಆಟಗಾರ ಎಲಿಯಸ್ ವೈಮರ್ ಅವರನ್ನು ಎದುರಿಸಲಿದ್ದಾರೆ.
Advertisement
ಮತ್ತೂಂದು ಸಿಂಗಲ್ಸ್‌ನಲ್ಲಿ ಭಾರತದ ನಂ.1 ಆಟಗಾರ ರಾಮ್‌ಕುಮಾರ್ ರಾಮನಾಥನ್ (332ನೇ ರ್‍ಯಾಂಕ್), ಲೆಜೆಂಡ್ರಿ ಟೆನಿಸಿಗ ಬೊÂàರ್ನ್ ಬೋರ್ಗ್ ಅವರ ಪುತ್ರ ಲಿಯೋ ಬೋರ್ಗ್ (603ನೇ ರ್‍ಯಾಂಕ್) ವಿರುದ್ಧ ಕಣಕ್ಕಿಳಿಯುವರು. ರಾಮ್‌ಕುಮಾರ್- ಬಾಲಾಜಿ ರವಿವಾರದ ಡಬಲ್ಸ್‌ನಲ್ಲೂ ಸೆಣಸಲಿದ್ದಾರೆ. ಫಿಲಿಪ್ ಬಗೇìವಿ- ಆ್ಯಂಡ್ರೆ ಗೊರಾನ್ಸನ್ ಇವರ ಎದುರಾ ಳಿಗಳು. ಅಂದೇ ರಿವರ್ಸ್ ಸಿಂಗಲ್ಸ್ ನಡೆಯಲಿದೆ. ನಿಕ್ಕಿ ಪೂಣಚ್ಚ ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ.
Related Articles
Advertisement