Advertisement

ರುದ್ರಭೂಮಿಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನ

11:48 AM Sep 19, 2017 | |

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿದಂತೆ ನಗರದಲ್ಲಿನ ರುದ್ರಭೂಮಿಗಳ ಅಭಿವೃದ್ಧಿಗೆ ಮುಂದಾಗಿರುವ ಬಿಬಿಎಂಪಿ 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಆಹ್ವಾನಿಸಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳು ಹಾಗೂ ಚಿತಾಗಾರಗಳ ಅಭಿವೃದ್ಧಿಗೊಳಿಸುವುದಾಗಿ 2016-17ನೇ ಆಯವ್ಯಯದಲ್ಲಿ ಬಿಬಿಎಂಪಿ ಘೋಷಿಸಿತ್ತು. ಅದರಂತೆ ಮೊದಲ ಹಂತದಲ್ಲಿ ನಗರದಲ್ಲಿನ 50 ರುದ್ರಭೂಮಿಗಳಿಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿ ಕೊಡುವುದಕ್ಕಾಗಿ ಬಿಬಿಎಂಪಿ ಟೆಂಡರ್‌ ಆಹ್ವಾನಿಸಿದೆ. ರುದ್ರಭೂಮಿ ಮತ್ತು ಚಿತಾಗಾರಗಳಲ್ಲಿ ನೀರಿನ ವ್ಯವಸ್ಥೆ, ಶೇಖರಣೆಯಾಗಿರುವ ತ್ಯಾಜ್ಯ ವಿಲೇವಾರಿ, ನಡಿಗೆ ಪಥ ದುರಸ್ತಿ, ಉದ್ಯಾನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಳಗೊಂಡ ವರದಿ ಸಿದ್ಧಪಡಿಸಿ ಪಾಲಿಕೆಗೆ ನೀಡಬೇಕು. 

ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 131 ರುದ್ರಭೂಮಿಗಳಿದ್ದು, ಅವುಗಳಲ್ಲಿ ಬಹುತೇಕ ರುದ್ರಭೂಮಿಗಳಲ್ಲಿ ಇಂದಿಗೂ ಮೂಲಸೌಕರ್ಯಗಳಿಲ್ಲ. ಅದಕ್ಕಾಗಿ ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಮೊದಲ ಹಂತದಲ್ಲಿ 50 ರುದ್ರಭೂಮಿ ಮತ್ತು ಚಿತಾಗಾರಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಆನಂತರದಲ್ಲಿ ಉಳಿದ ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. 

ಇದರೊಂದಿಗೆ ಪಾಲಿಕೆಯ ಎಲ್ಲ ರುದ್ರಭೂರ್ಮಿಗಳ ನಿರ್ವಹಣೆ ಹೊಣೆಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗುತ್ತಿದ್ದು, ರುದ್ರಭೂಮಿಗಳ ಸ್ವತ್ಛತೆಗಾಗಿಯೇ ಇಲಾಖೆಗೆ 25 ಕೋಟಿ ರೂ. ನೀಡಲಾಗುತ್ತಿದೆ. ಅದರಂತೆ ರುದ್ರಭೂಮಿಗಳನ್ನು ಸ್ವತ್ಛ ಹಾಗೂ ಸುಂದರವಾಗಿ ನಿರ್ವಹಣೆ ಮಾಡುವುದು ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next