ಜಪ್ಪು: ನಗರದ ಬಹುಮಹತ್ವದ ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿಗೆ ರೈಲ್ವೇ ಇಲಾಖೆ ಅನುಮತಿ ನೀಡಿ, ಟೆಂಡರ್ ಅಂತಿಮಗೊಳಿಸಿದೆ. ಮುಂದಿನ ತಿಂಗಳಿನಿಂದಲೇ ಇದರ ಕಾಮಗಾರಿ ಆರಂಭವಾಗಲಿದೆ.
ಮುಂಬಯಿಯ ವಿಜಯ ಇನ್ ಫ್ರಾ ಪ್ರಾಜೆಕ್ಟ್ ಪ್ರೈ.ಲಿ. ಸಂಸ್ಥೆ ಟೆಂಡರ್ ವಹಿಸಿಕೊಂಡಿದೆ. 17 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ. ಕಳೆದ ತಿಂಗಳು ಟೆಂಡರ್ ನೀಡಲಾಗಿದ್ದು, 1 ವರ್ಷದೊಳಗೆ ಕಾಮಗಾರಿ ಪೂರ್ಣವಾಗಬೇಕಿದೆ.
ಜಪ್ಪು ಮಹಾಕಾಳಿಪಡ್ಪು ವಿನಲ್ಲಿ ಚತುಷ್ಪಥ ರಸ್ತೆ, ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಹಲವು ವರ್ಷದ ಹಿಂದೆ ಪಾಲಿಕೆಯಿಂದ 24 ಕೋ.ರೂ. ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ. 50:50ರಂತೆ ಪಾಲಿಕೆ-ರೈಲ್ವೇಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ; ಹೀಗಾಗಿ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆ ವಾಪಾಸ್ ಕಳುಹಿಸಿತ್ತು. ಆದರೆ 24 ಕೋ. ರೂ.ಗಳನ್ನು ಮಂಗಳೂರು ಪಾಲಿಕೆ ಭರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿಸಲು ತೀರ್ಮಾನಿಸಿ, ಅದರಂತೆ 10 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್, ರಸ್ತೆ ಅಭಿವೃದ್ಧಿಗೆ ಉದ್ದೇಶಿಸಿತ್ತು. ಆದರೆ ಅದಕ್ಕೂ ಅನುಮೋದನೆ ದೊರೆತಿರಲಿಲ್ಲ. ರೈಲ್ವೇ ಕೆಳ ಸೇತುವೆ, ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ವ್ಯಾಪಕ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಇದೀಗ 17 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಸ್ಮಾರ್ಟ್ ರಸ್ತೆಗೆ ಬ್ರೇಕ್!
ರಾ.ಹೆ. 66ರಲ್ಲಿ ಜಪ್ಪುವಿನಿಂದ ಮೋರ್ಗನ್‌ಗೆàಟ್‌ವರೆಗೆ ಸ್ಮಾರ್ಟ್‌ಸಿಟಿ ವತಿಯಿಂದ ರಸ್ತೆ ನಿರ್ಮಾಣವಾಗಲಿದೆ. ಇದರ ಮಧ್ಯೆ ಮಹಾಕಾಳಿಪಡು³ವಿನಲ್ಲಿ ರೈಲ್ವೇ ಕೆಳಸೇತುವೆ. ಆದರೆ ಮಹಾಕಾಳಿಪಡು³ವರೆಗೆ ಸ್ಮಾರ್ಟ್‌ರಸ್ತೆ ಕಾಮಗಾರಿ ಸದ್ಯ ಮಳೆ, ಭೂಸ್ವಾಧೀನದಲ್ಲಿ ಆಗಿರುವ ಸಮಸ್ಯೆಯಿಂದ ನಿಧಾನವಾಗಿದೆ. ಜಪ್ಪುವಿನಿಂದ ರೈಲ್ವೇ ಕೆಳಸೇತುವೆವರೆಗೆ ಒಂದು ಹಂತದ ಕಾಂಕ್ರೀಟ್ ಕೆಲಸ ಆಗಿದೆ. ಆದರೆ ಅಂಡರ್‌ಪಾಸ್ ಆಗುವಲ್ಲಿಂದ ಅನಂತರ ಕೆಲವು ಭೂಸ್ವಾಧೀನ ವಿಚಾರಕ್ಕೆ ಆಕ್ಷೇಪವಿದ್ದ ಹಿನ್ನೆಲೆಯಲ್ಲಿ ಕಾಮಗಾರಿಗೆ ಸಮಸ್ಯೆ ಆಗಿತ್ತು. ಶಾಸಕ ವೇದವ್ಯಾಸ ಕಾಮತ್ ಅವರು ಈ ನಿಟ್ಟಿನಲ್ಲಿ ಭೂಮಾಲಕರ ಜತೆಗೆ ಮಾತಕತೆ ನಡೆಸಿದ್ದು, ಮಳೆಗಾಲದ ಅನಂತರ ಕಾಮಗಾರಿ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.
ಅಂಡರ್‌ಪಾಸ್‌ನಿಂದ ನೇತ್ರಾವತಿಗೆ ಚರಂಡಿ!
ಪಡೀಲ್ ರೈಲ್ವೇ ಅಂಡರ್‌ಪಾಸ್‌ನಲ್ಲಿ ಮಳೆಗಾಲದಲ್ಲಿ ನೀರು ನಿಂತು ಪ್ರಯಾಣಿಕರಿಗೆ ಸಮಸ್ಯೆ ಆಗುವ ಪರಿಸ್ಥಿತಿ ಜಪ್ಪು ಮಹಾಕಾಳಿಪಡು³ವಿನಲ್ಲಿ ಆಗಬಾರದು ಎಂಬ ಕಾರಣದಿಂದ ಜಪ್ಪು ಅಂಡರ್‌ಪಾಸ್ ಆಗುವಲ್ಲಿಂದ ನೇತ್ರಾವತಿಗೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ. ಅಂಡರ್‌ಪಾಸ್ ಮಾಡುವ ಸಂದರ್ಭದಲ್ಲಿಯೇ ಸುಸಜ್ಜಿತ ಚರಂಡಿ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆಯಿಂದ ರೈಲ್ವೇ ಇಲಾಖೆಗೂ ತಿಳಿಸಲಾಗಿದೆ. ಮಳೆಗಾಲದಲ್ಲಿ ವಾಹನ ಓಡಾಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿ ಶೀಘ್ರ ಆರಂಭ: ಜಪ್ಪು ಮಹಾಕಾಳಿಪಡು³ವಿನಲ್ಲಿ ರೈಲ್ವೇ ಕೆಳಸೇತುವೆ ನಿರ್ಮಾಣ ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ. ಕಾಮಗಾರಿ ಆದ ಬಳಿಕ ಮಳೆನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನದಲ್ಲಿ ಎದುರಾಗಿದ್ದ ಕೆಲವು ಸಮಸ್ಯೆಯನ್ನು ಸರಿಪಡಿಸಲಾಗಿದೆ. –
ವೇದವ್ಯಾಸ ಕಾಮತ್, ಶಾಸಕರು
-ದಿನೇಶ್ ಇರಾ