Advertisement

ದೆಹಲಿ: ಮನೆಯೊಡೆಯನನ್ನು ಕೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಪರಾರಿ

06:58 PM Aug 20, 2022 | Team Udayavani |

ನವದೆಹಲಿ: ತೀವ್ರ ವಾಗ್ವಾದದ ಬಳಿಕ ಬಾಡಿಗೆದಾರನೊಬ್ಬ ತನ್ನ ಮನೆಯೊಡೆಯನನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮೃತನ ಸಾಮಾನುಗಳೊಂದಿಗೆ ಪರಾರಿಯಾಗಿರುವ ಘಟನೆ ವಾಯುವ್ಯ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿ ಪಂಕಜ್ ಕುಮಾರ್ (25) ಸಾಹ್ನಿ ಬಿಹಾರದ ಸಮಸ್ತಿಪುರ್ ಜಿಲ್ಲೆಯವನು. ಸಾಹ್ನಿ ಮೆಟ್ರೋದಲ್ಲಿ ಪ್ರಯಾಣಿಸಿ, ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ನವದೆಹಲಿಯಿಂದ ಹರಿಯಾಣದ ರೋಹ್ಟಕ್‌ಗೆ ರೈಲು ಹತ್ತಿದ್ದ ಆದರೆ ಆತನನ್ನು ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಹಚ್ಚಲಾಯಿತು ಮತ್ತು ಸುಮಾರು 250 ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿ ನಂತರ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗದೀಶ್ ಅವರು ತಂದೆ ಸುರೇಶ್ ಅವರ ಹತ್ಯೆ ನಡೆದಿದೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಜಗದೀಶ್ ಪ್ರಕಾರ, ನಾಲ್ಕು ದಿನಗಳ ಹಿಂದೆ ಸಾಹ್ನಿ ಅವರ ತಂದೆ ಬಂದು ಅವನನ್ನು ಅನಾಥ ಎಂದು ಪರಿಚಯಿಸಿದರು ಮತ್ತು ಎರಡನೇ ಮಹಡಿಯನ್ನು ತನಗೆ ಬಾಡಿಗೆಗೆ ನೀಡಬೇಕೆಂದು ಕೇಳಿದ್ದರು. ಅವರು ಸಾಹ್ನಿಗೆ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 9 ರ ಸಂಜೆ, ಸಾಹ್ನಿ ಕುಡಿದ ಮತ್ತಿನಲ್ಲಿ ಮನೆಗೆ ಮರಳಿದ್ದು, ಸುರೇಶ್ ಮತ್ತು ಅವನ ನಡುವೆ ವಾಗ್ವಾದವೂ ನಡೆಯಿತು. ನಂತರ ಸಾಹ್ನಿ ಸುರೇಶ್ ಮತ್ತು ಜಗದೀಶ್ ಅವರಲ್ಲಿ ಕ್ಷಮೆಯಾಚಿಸಿದಾಗ ವಿಷಯ ಶಾಂತವಾಗಿತ್ತು. ಆಗಸ್ಟ್ 10 ರಂದು ಮುಂಜಾನೆ ಜಗದೀಶ್‌ಗೆ ಕರೆ ಮಾಡಿದ ಸಾಹ್ನಿ, ಸುರೇಶ್ ತನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದರಿಂದ ಅವನು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಹೋಗಿರುವುದಾಗಿ ತಿಳಿಸಿದನು. ಅಸಹಜ ಮತ್ತು ಅನುಮಾನಾಸ್ಪದ ಸಂಗತಿಯನ್ನು ಗ್ರಹಿಸಿದ ಜಗದೀಶ್ ಮೊದಲ ಮಹಡಿಗೆ ಧಾವಿಸಿ ನೋಡಿದಾಗ ತನ್ನ ತಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ತಲೆಗೆ ಗಾಯವಾಗಿ ರಕ್ತಸ್ರಾವವಾಗುವುದನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಬೆಳಗ್ಗೆ 6.41 ಕ್ಕೆ ಕೊಲೆಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು ಮತ್ತು ಸ್ಥಳಕ್ಕೆ ಬಂದರು. ಸುರೇಶ್  ತಲೆಯಿಂದ ರಕ್ತಸ್ರಾವ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಅವರು ಕಂಡುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next