Advertisement

ಮೂರನೇ ಹಂತಕ್ಕೆ ಹತ್ತು ಲಸಿಕೆ; ಖರೀದಿ ಒಪ್ಪಂದಕ್ಕೆ ಸ್ಪರ್ಧೆ

01:31 AM Oct 17, 2020 | mahesh |

ಹೊಸದಿಲ್ಲಿ: ಜಗತ್ತು 2020ರ ಅಂಚಿಗೆ ಬಂದು ನಿಂತಿದೆ. ಕೊರೊನಾ ಲಸಿಕೆಯ ಬೆಳಕು ಈ ವರ್ಷವೇ ಮೂಡುತ್ತಾ ಎನ್ನುವುದು ಸದ್ಯದ ಕುತೂಹಲ. ಲಸಿಕೆ ಶೋಧಕ್ಕೆ ಬೃಹತ್‌ ಪೈಪೋಟಿ ಎದ್ದಿದೆ. ಡಬ್ಲ್ಯುಎಚ್‌ಒ ಪ್ರಕಾರ, 193 ಲಸಿಕೆ ತಯಾರಕ ಪ್ರತಿನಿಧಿಗಳು ಸ್ಪರ್ಧೆಯಲ್ಲಿದ್ದಾರೆ. ಇವುಗಳಲ್ಲಿ 42 ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿದ್ದರೆ, ಕೇವಲ 10 ಲಸಿಕೆಗಳಷ್ಟೇ 3ನೇ ಹಂತ ಪ್ರವೇಶಿಸಿವೆ. ಈಗ ಜಗತ್ತು ಎದುರು ನೋಡುತ್ತಿರು ವುದೇ ಈ 10 ಲಸಿಕೆ ತಯಾರಕ ಸಂಸ್ಥೆಗಳತ್ತ. ಈಗಾಗಲೇ ಇವು ಹತ್ತಾರು ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಿವೆ.

Advertisement

3ನೇ ಹಂತ ತಲುಪಿದ 10 ಲಸಿಕೆಗಳು
ಆಕ್ಸ್‌ಫ‌ರ್ಡ್‌ ವಿವಿ ಮತ್ತು ಅಸ್ಟ್ರಾಜೆನೆಕಾ, ಮಾಡೆರ್ನಾ, ಪಿಫೈಝರ್‌ ಮತ್ತು ಬಯೋ ಎನ್‌ಟೆಕ್‌, ಜಾನ್ಸೆನ್‌ ಫಾರ್ಮಾಸುÂಟಿಕಲ್‌ ಕಂಪನಿ (ಜಾನ್ಸನ್‌ ಆ್ಯಂಡ್‌ ಜಾನ್ಸನ್‌), ಗಾಮಾಲೆಯಾ ರಿಸರ್ಚ್‌ ಇನ್‌ಸ್ಟಿಟ್ಯೂಟ್‌, ಸಿನೋವ್ಯಾಕ್‌, ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್ ಬಯೋಲಾಜಿಕಲ್‌ ಪ್ರಾಡಕ್ಟ್, ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್ ಬಯೋಲಾಜಿಕಲ್‌ ಪ್ರಾಡಕ್ಟ್$Õ, ಕ್ಯಾನ್‌ಸಿನೊ, ನೊವೊವ್ಯಾಕ್ಸ್‌- ಈ 10 ಸಂಸ್ಥೆಗಳು ಶೋಧಿಸಿರುವ ಲಸಿಕೆ 3ನೇ ಹಂತದ ಪ್ರಯೋಗದಲ್ಲಿವೆ. ವಿವಿಧ ದೇಶಗಳಲ್ಲಿ ಇದರ ಪ್ರಯೋಗ ಸಾಗಿದೆ. ರಷ್ಯಾ “ಸ್ಪುಟ್ನಿಕ್‌- 5′ ಲಸಿಕೆ ಆವಿಷ್ಕರಿಸಿದ್ದರೂ, ವಿಶ್ವಾಸಾರ್ಹತೆ ಪ್ರಶ್ನೆ ಎದುರಾಗಿದೆ.

ಲಸಿಕೆ ಖರೀದಿಗೆ ರೆಡೀನಾ?
ಸಿರಿವಂತ ದೇಶಗಳು ಈಗಾಗಲೇ ಲಸಿಕೆ ಖರೀದಿ ಒಪ್ಪಂದಕ್ಕೆ ಸಹಿಹಾಕಿ ಕಾದು ಕುಳಿತಿವೆ. ಮತ್ತೆ ಕೆಲವು ದೇಶಗಳು ಲಸಿಕೆ ಪರಿಣಾಮ ನೋಡಿಕೊಂಡು ನಿರ್ಧರಿಸುವ ಸಾಧ್ಯತೆ ಇದೆ. ಆದರೆ, ಈ ಖರೀದಿ ಸ್ಪರ್ಧೆಯಲ್ಲಿ ಬಡರಾಷ್ಟ್ರಗಳು ಭಾರೀ ಹಿಂದುಳಿದಿವೆ.

ಅಮೆರಿಕ: ಕೊರೊನಾದಿಂದ ಅತೀ ಹೆಚ್ಚು ನಲುಗಿರುವ ಅಮೆರಿಕ 100 ಕೋಟಿ ಡೋಸ್‌ಗೆ ಬೇಡಿಕೆ ಇಟ್ಟಿದೆ. ಇದರಲ್ಲಿ 30 ಕೋಟಿ ಡೋಸ್‌ಗಳ ಖರೀದಿಗೆ ಅಸ್ಟ್ರಾಜೆನಿಕಾ ಜತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ 1.2 ಬಿಲಿಯನ್‌ ಡಾಲರ್‌ ಮೀಸಲಿಟ್ಟಿದೆ. ಮಾಡೆರ್ನಾ ಇಂಕ್‌ನ ಲಸಿಕೆ ಉತ್ಪಾದನೆ, ಪೂರೈಕೆ ಒಪ್ಪಂದಕ್ಕೂ ಸಹಿಹಾಕಿದೆ.

ಯುರೋಪ್‌ ರಾಷ್ಟ್ರಗಳು: ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳ ಪರವಾಗಿ ಯುರೋಪಿಯನ್‌ ಕಮಿಷನ್‌ ಅಸ್ಟ್ರಾಜೆನಿಕಾ ಜತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ, ಎಲ್ಲ ಸದಸ್ಯ ರಾಷ್ಟ್ರಗಳು 30 ಕೋಟಿ ಲಸಿಕೆ ಖರೀದಿ ಮಾಡಬಹುದಾಗಿದೆ. 10 ಕೋಟಿ ಹೆಚ್ಚುವರಿ ಖರೀದಿಗೂ ಅವಕಾಶವಿದೆ.

Advertisement

ಭಾರತ: ವಿಶ್ವದ 2ನೇ ಸೋಂಕಿತ ರಾಷ್ಟ್ರ ಭಾರತ ಇದುವರೆಗೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆದರೆ, ಇದಕ್ಕಾಗಿ ಹಣ ಮೀಸಲಿಟ್ಟು ಕೊಂಡಿದೆ. ಅ.4ರಂದು ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿರುವಂತೆ, 2021ರಲ್ಲಿ ಲಸಿಕೆ ತಯಾರಾದ ತಕ್ಷಣ 40-50 ಕೋಟಿ ಲಸಿಕೆ ಖರೀದಿಗೆ ಸರಕಾರ ಯೋಜಿಸಿದೆ. ಮೊದಲ ಹಂತದಲ್ಲಿ ಈ ಲಸಿಕೆ 20-25 ಲಕ್ಷ ಮಂದಿಗೆ ಸಾಕಾಗಲಿದೆ. ಯಾವ ಸಂಸ್ಥೆಯಿಂದ ಖರೀದಿಸು ವುದು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಸಾವು ಕಡಿಮೆ
ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ ಭಾರೀ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. “ಮರಣ ಪ್ರಮಾಣ ಮಾ. 22ರಿಂದಲೂ ಇಳಿ ಮುಖ ವಾಗಿಯೇ ಇದೆ. ಪ್ರಸ್ತುತ ಈ ಪ್ರಮಾಣ 1.52 ರಷ್ಟಿದೆ’ ಎಂದು ತಿಳಿಸಿದೆ. 63,371 ಸೋಂಕಿತರು: ಭಾರತ ದಲ್ಲಿ ಶುಕ್ರವಾರ 63,371 ಹೊಸ ಕೇಸುಗಳು ಪತ್ತೆಯಾ ಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 73,70, 468 ಮುಟ್ಟಿದೆ. ಚೇತರಿಕೆ ಪ್ರಮಾಣ ಶೇ.87.56ರಷ್ಟಿದೆ.

ಸಚಿವ ಬಲಿ
ಸೋಂಕು ತಗಲಿ, ಆಸ್ಪತ್ರೆಗೆ ದಾಖಲಾಗಿದ್ದ ಬಿಹಾರದ ಪಂಚಾಯತ್‌ರಾಜ್‌ ಸಚಿವ ಕಪಿಲ್‌ ಡಿಯೊ ಕಾಮತ್‌ ಶುಕ್ರ ವಾರ ಏಮ್ಸ್‌ನಲ್ಲಿ ನಿಧನ ಹೊಂದಿ ದ್ದಾರೆ. ಅ.1ರಂದು ಇವ ರನ್ನು ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ರಾಜ್ಯಸಭಾ ಸದಸ್ಯ ಗುಲಾಮ್‌ ನಬಿ ಆಜಾದ್‌ ಅವರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.

6 ಹಂತ ದಾಟಿ, ಜನರ ಕೈಗೆ ಸಿಗುತ್ತೆ!
ಪ್ರಿ-ಕ್ಲಿನಿಕಲ್‌ ಸ್ಟಡಿ: ಪ್ರಾಣಿಗಳ ಮೇಲೆ ಪ್ರಯೋಗ.
1ನೇ ಹಂತ: ಆರೋಗ್ಯವಂತ ವಯಸ್ಕ ಪ್ರತಿನಿಧಿಗಳ ಮೇಲೆ ಟೆಸ್ಟ್‌.
2ನೇ ಹಂತ: ವಯಸ್ಸು, ದೈಹಿಕ ಗುಣಲಕ್ಷಣ ಆಧರಿಸಿ ಪ್ರಯೋಗ.
3ನೇ ಹಂತ: ಸಾವಿರ ಮಂದಿ ಮೇಲೆ ಪ್ರಯೋಗ, ಸುರಕ್ಷತೆ ಅಧ್ಯಯನ.
4ನೇ ಹಂತ: ಅನುಮೋದನೆ, ಲೈಸೆನ್ಸ್‌ ಪಡೆಯುವಿಕೆ. ಲಸಿಕೆ ಪಡೆದವರ ಆರೋಗ್ಯ ವೀಕ್ಷಣೆ.
ಮಾನವ ಸವಾಲು ಪರೀಕ್ಷೆ: ವೈರಾಣುವಿನ ಸವಾಲಿಗೆ ತಕ್ಕಂತೆ ಲಸಿಕೆ ವಿನ್ಯಾಸ. ಲಸಿಕೆ ಪಡೆದ ಮನುಷ್ಯನ ನೈತಿಕ ಸವಾಲುಗಳ ಅಧ್ಯಯನ.

Advertisement

Udayavani is now on Telegram. Click here to join our channel and stay updated with the latest news.

Next