Advertisement
ತಾಲೂಕಿನ ಪುರವರ ಹೋಬಳಿಯ ಹನುಮಂತಪುರದಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಣ ನೀಡದೆ ಕೇವಲ ಖಾಲಿ ಬಜೆಟ್ ಘೋಷಣೆ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಿರುವ ಸಿಎಂ ಬೊಮ್ಮಾಯಿ ಹಣ ನೀಡದೆ ವಂಚಿಸುತ್ತಿದ್ದಾರೆ. ಹಣ ನೀಡಿ ಬಜೆಟ್ ಘೋಷಣೆ ಮಾಡಿದರೆ ನಮ್ಮದೇನು ತಕರಾರು ಇಲ್ಲ ಕೇವಲ ಚುನಾವಣಾ ದೃಷ್ಟಿಯಿಂದ ಸುಳ್ಳಿನ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದರು.
ರಾಜ್ಯದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ರೆಡ್ಡಿ ಪಾರ್ಟಿ, ಎಂಐಎಂ, ಕೆಆರ್ ಎಸ್, ಇತರೆ ಪಕ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗಲ್ಲ. ಆದರೆ ಮೂರು ಪಕ್ಷಗಳ ಸ್ವಲ್ಪ ಮತಗಳನ್ನು ಪಡೆಯಬಹುದಷ್ಟೇ. ಜೆಡಿಎಸ್ 123 ಸ್ಥಾನಗಳ ಬಗ್ಗೆ ಉತ್ತರಿಸಿದ ಪರಂ, ಅದು ಒಂದು ಪ್ರಾದೇಶಿಕ ಪಕ್ಷವಾಗಿದ್ದು ಅವರದ್ದೆ ಆದ ರಿಪೋರ್ಟ್ ಇರುತ್ತದೆ. ಮೊದಲು 224 ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಉಳಿದದನ್ನು ನೋಡಬಹುದು. ಆದರೆ ಕಾಂಗ್ರೆಸ್ 224 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಅಧಿಕಾರಕ್ಕೆ ಬರಲಿದೆ ಎಂದರು. ಕಾಂಗ್ರೆಸ್ ನಲ್ಲಿ ಹತ್ತು ಜನ ಸಿಎಂ ರೇಸ್ ನಲ್ಲಿದ್ದು ನಾನು ಕೂಡ ಅದರಲ್ಲಿ ಒಬ್ಬ. ದಲಿತ ಸಿಎಂ ಬಗ್ಗೆ ಮಾತನಾಡಿದ ಅವರು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಿದ್ದು ದಲಿತ ಸಿಎಂ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು. ಲೆಕ್ಕಕೊಟ್ಟು ಮತ ಕೇಳುತ್ತಿದ್ದೇನೆ
ತಾಲೂಕಿನ ಅಭಿವೃದ್ಧಿಗೆ ಕಳೆದ ಐದು ವರ್ಷದಲ್ಲಿ ಎರಡುವರೆ ಸಾವಿರ ಕೋಟಿ ಅನುದಾನ ತಂದಿದ್ದು ಸಮಗ್ರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ಹಣ. ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ನೀಡುವ ಕಾರ್ಯಕ್ರಮ ನೀಡಲಿದ್ದೇವೆ. ಕ್ಷೇತ್ರಕ್ಕೆ 20 ಸಾವಿರ ಮನೆಗಳನ್ನು ತಂದಿದ್ದು ಮೂಲಭೂತ ಕಾಮಗಾರಿಗಳನ್ನು ನೋಡಿ ನನಗೆ ಮತ ನೀಡುವಂತೆ ಮನವಿ ಮಾಡಿದರು.
Related Articles
Advertisement