Advertisement

ದಿಲ್ಲಿಯಲ್ಲಿ ದಟ್ಟ ಮಂಜು, ಕನಿಷ್ಠ ಗೋಚರತೆ: ಹತ್ತು ವಿಮಾನ ಬೇರೆಡೆಗೆ

05:08 AM Mar 04, 2019 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಟ್ಟನೆ ಮಂಜು ಕವಿದಿರುವ ಕಾರಣ ಇಂದು ಸೋಮವಾರ ದಿಲ್ಲಿ ವಿಮಾನ ನಿಲ್ದಾಣದಿಂದ ಕನಿಷ್ಠ ಹತ್ತು ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸೋಮವಾರ ಬೆಳಗ್ಗೆ 7.45ರಿಂದ 9.10 ರ ನಡುವೆ ಸುಮಾರು ಹತ್ತು ವಿಮಾನಗಳನ್ನು ದಿಲ್ಲಿ ವಿಮಾನ ನಿಲ್ದಾಣದಿಂದ ಬೇರೆಡೆಗೆ ಕಳುಹಿಸಲಾಯಿತು. ದಟ್ಟನೆಯ ಮಂಜು ಕವಿದ ಕಾರಣ ಅತ್ಯಂತ ಕಡಿಮೆ ದೃಗ್‌ ಗೋಚರತೆ ಇದ್ದ ಕಾರಣ ಒಂದು ಅಂತಾರಾಷ್ಟ್ರೀಯ ವಿಮಾನ ಮತ್ತು 9 ದೇಶೀ ಹಾರಾಟದ ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ದಿಲ್ಲಿಯಲ್ಲಿ ಕನಿಷ್ಠ ರನ್‌ ವೇ ಗೋಚರತೆಯು 125 ಮೀಟರ್‌ ಇರಬೇಕೆಂಬ ನಿಯಮವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next