Advertisement

ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವು

10:01 AM Dec 02, 2019 | Sriram |

ಮ್ಯಾಕ್ಸಿಲೊಫೇಶಿಯಲ್‌ ಪ್ರದೇಶದಲ್ಲಿ ಇದ್ದು, ದವಡೆಗಳನ್ನು ತೆರೆಯಲು ಮತ್ತು ಮುಚ್ಚಲು ಸಹಕರಿಸುವ ಸಂಧಿಯೇ ಟೆಂಪರೊಮಾಂಡಿಬ್ಯುಲಾರ್‌ ಸಂಧಿ. ಜೀವನಶೈಲಿ ಬದಲಾವಣೆ ಮತ್ತು ಒತ್ತಡದ ಕಾರಣಗಳಿಂದಾಗಿ ಟೆಂಪರೊಮಾಂಡಿಬ್ಯುಲಾರ್‌ ಸಂಧಿಯಲ್ಲಿ ನೋವು ಇತ್ತೀಚೆಗಿನ ದಿನಗಳಲ್ಲಿ ಬಹುಸಾಮಾನ್ಯವಾಗಿ ಕೇಳಿಬರುತ್ತಿರುವ ಅನಾರೋಗ್ಯವಾಗಿದೆ.

Advertisement

ಈ ಲೇಖನವು ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವಿಗೆ ಕಾರಣಗಳೇನು ಮತ್ತು ಅದು ಕಾಣಿಸಿಕೊಂಡರೆ ಏನು ಮಾಡಬೇಕು ಎಂಬ ಬಗ್ಗೆ ಗಮನಹರಿಸುತ್ತದೆ.

ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವು: ಸಾಮಾನ್ಯ ಕಾರಣಗಳು
1. ಒತ್ತಡ: ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವಿಗೆ ಒತ್ತಡವೇ ಪ್ರಧಾನ ಕಾರಣ. ಧ್ಯಾನವನ್ನು ಅಭ್ಯಾಸ ಮಾಡುವುದು ಮತ್ತು ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಂಡು ಈ ನೋವು ಉಂಟಾಗುವ ಸಾಧ್ಯತೆಗಳನ್ನು ದೂರ ಮಾಡಬಹುದಾಗಿದೆ.
2. ಹಲ್ಲಿಲ್ಲದಿರುವಿಕೆ: ವ್ಯಕ್ತಿಯ ಬಾಯಿಯಲ್ಲಿ ಹಲವು ಹಲ್ಲುಗಳು ಇಲ್ಲದೇ ಇದ್ದರೆ ಜಗಿಯುವ ಶಕ್ತಿಯ ಪ್ರಯೋಗವು ಟೆಂಪರೊಮಾಂಡಿಬ್ಯುಲಾರ್‌ ಸಂಧಿಯತ್ತ ಬದಲಾಗಬೇಕಾಗುತ್ತದೆ. ಇದರಿಂದಾಗಿ ಆಗಾಗ ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವು ಕಾಣಿಸಿಕೊಳ್ಳಬಹುದು.
3. ಹವ್ಯಾಸಗಳು: ಹಲ್ಲು ಕಡಿಯುವುದು, ಸತತವಾಗಿ ಚೂÂಯಿಂಗ್‌ ಗಮ್‌ ಜಗಿಯುವುದು, ಉಗುರು ಕಡಿಯುವುದು ಇತ್ಯಾದಿ ಹವ್ಯಾಸಗಳನ್ನು ಹೊಂದಿದ್ದರೆ ಅವುಗಳು ಕೂಡ ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವಿಗೆ ಕಾರಣವಾಗಬಲ್ಲವು.
4. ಟೆಂಪರೊಮಾಂಡಿಬ್ಯುಲಾರ್‌ ಸಂಧಿಗೆ ಹಿಂದೆ ಗಾಯ/ ಹಾನಿಯಾಗಿದ್ದರೆ: ಹಿಂದೆ ಯಾವತ್ತಾದರೂ ಬಿದ್ದು ಅಥವಾ ಇನ್ಯಾವುದೇ ಕಾರಣದಿಂದ ಟೆಂಪರೊಮಾಂಡಿಬ್ಯುಲಾರ್‌ ಸಂಧಿಗೆ ಗಾಯ ಅಥವಾ ಹಾನಿಯಾಗಿದ್ದರೆ ಅದು ನೋವಾಗಿ ಕಾಡಬಹುದು.
5. ಹಲ್ಲುಗಳನ್ನು ತಪ್ಪಾಗಿ ಫಿಲ್ಲಿಂಗ್‌ ಮಾಡಿದ್ದರೆ: ಬಾಯಿಯಲ್ಲಿ ಯಾವುದಾದರೂ ಫಿಲ್ಲಿಂಗ್‌ ಮಾಡಿದ್ದು, ಅದು ಹಲ್ಲುಗಳಿಗೆ ಸರಿಯಾಗಿ ಹೊಂದಾಣಿಕೆ ಆಗದೆ ಇದ್ದರೆ ಟೆಂಪರೊಮಾಂಡಿಬ್ಯುಲಾರ್‌ ಸಂಧಿ ಭಾಗದ ಮೇಲೆ ಅನವಶ್ಯಕ ಒತ್ತಡ ಉಂಟಾಗಬಹುದು. ಇದರಿಂದಲೂ ನೋವು ಕಾಣಿಸಿಕೊಳ್ಳಬಹುದು.
6. ಕಿವಿಯ ಸೋಂಕು: ಕಿವಿಯ ಸೋಂಕು ಇದ್ದರೆ ಅದರಿಂದಲೂ ನೋವು ಕಾಣಿಸಿಕೊಳ್ಳಬಹುದು.

ಮುನ್ನೆಚ್ಚರಿಕೆ ಯಾವಾಗ ತೆಗೆದುಕೊಳ್ಳಬೇಕು?
ಟೆಂಪರೊಮಾಂಡಿಬ್ಯುಲಾರ್‌ ಸಂಧಿ ಪ್ರದೇಶದಲ್ಲಿ ಲಘು ಪ್ರಮಾಣದ ನೋವು ಕಾಣಿಸಿಕೊಂಡರೆ ಅದು ನೋವು ನಿವಾರಕ ಔಷಧಗಳು ಮತ್ತು ವಿಶ್ರಾಂತಿಯ ಮೂಲಕ ಕಡಿಮೆಯಾಗುತ್ತದೆ. ಆದರೆ ದೀರ್ಘ‌ಕಾಲ ನೋವು ಉಳಿದುಕೊಂಡರೆ ಅದನ್ನು ನಿರ್ಲಕ್ಷಿಸಬಾರದು.

ಆರಂಭಿಕ ಹಂತಗಳಲ್ಲಿ ನೋವನ್ನು ಕಡೆಗಣಿಸಿದರೆ ಸ್ವಲ್ಪ ಕಾಲದ ಬಳಿಕ ರೋಗಿಯಲ್ಲಿ ಟೆಂಪರೊಮಾಂಡಿಬ್ಯುಲಾರ್‌ ಸಂಧಿಯ ಸ್ಥಾನಪಲ್ಲಟ ಎಂಬ ಸ್ಥಿತಿ ಉಂಟಾಗಬಹುದು. ಇದು ಉಂಟಾದರೆ ರೋಗಿಗೆ ತನ್ನ ಬಾಯಿಯನ್ನು ಮುಚ್ಚಿ -ತೆರೆಯಲು ಸಾಧ್ಯವಾಗುವುದಿಲ್ಲ. ಹೀಗಾದರೆ ಬಾಯಿಯ ಶಸ್ತ್ರಚಿಕಿತ್ಸಾ ಪರಿಣಿತ ವೈದ್ಯರು ಸ್ಥಾನಪಲ್ಲಟಗೊಂಡ ಸಂಧಿಯನ್ನು ಸ್ವಸ್ಥಾನಕ್ಕೆ ಮರಳಿಸಬೇಕಾಗುತ್ತದೆ.
ಬಾಯಿ ಮುಚ್ಚಿ -ತೆರೆಯುವಾಗ ಕ್ಲಿಕ್‌ ಸದ್ದು ಕೂಡ ಕೇಳಿಬರಬಹುದು ಮತ್ತು ಮುಚ್ಚಿ-ತೆರೆಯುವ ಸಂದರ್ಭದಲ್ಲಿ ಕೆಳದವಡೆಯು ಒಂದು ಕಡೆಗೆ ವಾಲುವುದು ಕಂಡುಬರಬಹುದು. ಇಂತಹ ಸ್ಥಿತಿಯು ಉಂಟಾಗಿದ್ದರೆ ಸಂಧಿಗೆ ಸರಿಯಾದ ಚಿಕಿತ್ಸೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ಮ್ಯಾಕ್ಸಿಲೊಫೇಶಿಯಲ್‌ ಸರ್ಜನ್‌ ಅವರ ಜತೆಗೆ ಸಮಾಲೋಚಿಸಬೇಕಾಗುತ್ತದೆ.

Advertisement

ಟೆಂಪರೊಮಾಂಡಿಬ್ಯುಲಾರ್‌
ಸಂಧಿನೋವಿನ ಉಪಶಮನಕ್ಕಾಗಿ
ಸಾಮಾನ್ಯವಾದ ಮನೆ ಮದ್ದು/
ಪರಿಹಾರೋಪಾಯ
1. ಸಂಧಿಗೆ ಸರಿಯಾದ ವಿಶ್ರಾಂತಿಯನ್ನು ಒದಗಿಸುವುದು: ಟೆಂಪರೊಮಾಂಡಿಬ್ಯುಲಾರ್‌ ಸಂಧಿ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಮೃದುವಾದ ಆಹಾರ ಸೇವನೆ, ಬಾಯಿ ತೆರೆದು- ಮುಚ್ಚುವುದನ್ನು ಕಡಿಮೆ ಮಾಡುವುದೇ ಮೊದಲಾದ ಕ್ರಮಗಳ ಮೂಲಕ ದವಡೆ ಮತ್ತು ಟೆಂಪರೊಮಾಂಡಿಬ್ಯುಲಾರ್‌ ಸಂಧಿ ಪ್ರದೇಶಕ್ಕೆ ಸರಿಯಾದ ವಿಶ್ರಾಂತಿಯನ್ನು ಒದಗಿಸಬೇಕು. ಉಗುರು ಕಡಿಯುವುದು, ಚೂಯಿಂಗ್‌ ಗಮ್‌ ಜಗಿಯುವುದು ಮೊದಲಾದ ಹವ್ಯಾಸಗಳನ್ನು ತತ್‌ಕ್ಷಣ ನಿಲ್ಲಿಸಬೇಕು.

2. ಆದ್ರìವಾದ ಶಾಖ ನೀಡುವುದು: ಬಿಸಿ ನೀರಿನಲ್ಲಿ ಅದ್ದಿದ ಟವೆಲನ್ನು ದಿನಕ್ಕೆ ನಾಲ್ಕೈದು ಬಾರಿ ಸಂಧಿ ಭಾಗದ ಮೇಲೆ ಒತ್ತಿ ಇರಿಸಬೇಕು. ಈ ಅಭ್ಯಾಸವು ನೋವಿನಿಂದ ಸಾಕಷ್ಟು ಉಪಶಮನವನ್ನು ನೀಡುತ್ತದೆ.

ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವನ್ನು ಗಂಭೀರವಾಗಿ ಪರಿಗಣಸಬೇಕು. ನಿರ್ಲಕ್ಷಿಸಿದರೆ ಅದು ಸಾಕಷ್ಟು ತೊಂದರೆಗಳನ್ನು ಉಂಟುಮಾಡಬಲ್ಲುದು. ರೋಗಿಯು ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಶಸ್ತ್ರಚಿಕಿತ್ಸಾ ಪರಿಣತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.

ಸಾಮಾನ್ಯ ಚಿಕಿತ್ಸೆಯ ಬಳಿಕವೂ ನೋವು ತಗ್ಗದಿದ್ದರೆ ವೈದ್ಯರು ಕೂಲಂಕಷ ತಪಾಸಣೆಯ ಬಳಿಕ ಆವಶ್ಯಕತೆಗೆ ಅನುಗುಣವಾಗಿ ಅನಾಲೆjಸಿಕ್‌ ಮತ್ತು ಸ್ನಾಯು ವಿಶ್ರಾಮಕ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಹಲ್ಲು ಕಡಿಯುವುದನ್ನು ನಿಲ್ಲಿಸುವ ಸಲುವಾಗಿ ಒದಗಿಸಲಾಗುವ ಸಲಕರಣೆಯನ್ನೂ ರೋಗಿಯ ಆವಶ್ಯಕತೆಗೆ ಅನುಗುಣವಾಗಿ ನೀಡಬಹುದಾಗಿದೆ.

ಹೀಗಾಗಿ ಟೆಂಪರೊಮಾಂಡಿಬ್ಯುಲಾರ್‌ ಸಂಧಿ ನೋವನ್ನು ನೀವು ಅನುಭವಿಸುತ್ತಿದ್ದರೆ ತತ್‌ಕ್ಷಣವೇ ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜನರನ್ನು ಭೇಟಿಯಾಗಿ.

-ಡಾ| ಆನಂದ್‌ದೀಪ್‌ ಶುಕ್ಲಾ
ಅಸೋಸಿಯೇಟ್‌ ಪ್ರೊಫೆಸರ್‌
ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next