Advertisement

ಕೋವಿಡ್ ವಿರುದ್ಧ ತಾತ್ಕಾಲಿಕ ಅಸ್ತ್ರ

05:47 PM May 09, 2020 | sudhir |

ಲಂಡನ್‌: ಕೋವಿಡ್‌-19 ವಿರುದ್ಧ ಜಗತ್ತಿನಾದ್ಯಂತ ಔಷಧಗಳನ್ನು ಸಂಶೋಧಿಸಲಾಗುತ್ತಿದೆ. ಈ ಕುರಿತ ಒಂದು ಸಾಧ್ಯತೆಯನ್ನು ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌ನಲ್ಲಿ ಕಳೆದ ವಾರ ಪ್ರಕಟಿಸಲಾಗಿದೆ.

Advertisement

ರೆಮೆಡ್‌ಸಿಮಿರ್‌ ಎಂಬ ಔಷಧ ಪರಿಣಾಮಕಾರಿಯಾಗಬಹುದು ಎಂದು ಆ ಲೇಖನದಲ್ಲಿ ತಿಳಿಸಲಾಗಿದೆ. ಬಳಿಕ ಈ ಔಷಧವನ್ನು ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, 18 ದಿನಗಳ ಚಿಕಿತ್ಸೆಯ ಬಳಿಕ ಆಕ್ಸಿಜನ್‌ ಸಪೋರ್ಟ್‌ನಲ್ಲಿದ್ದ 36 ರೋಗಿಗಳಲ್ಲಿ ಅಂದರೆ ಶೇ. 68 ರೋಗಿಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿದೆ ಎಂದು ವಿವರಿಸಲಾಗಿತ್ತು.

ಇದೀಗ ಈ ಸಾಧ್ಯತೆಯ ಕುರಿತು ತೀವ್ರ ಕುತೂಹಲ ಕೆರಳಿಸಿರುವ ಜಪಾನ್‌ ಆ್ಯಂಟಿ ವೈರಲ್‌ ಔಷಧವಾಗಿ ಬಳಸಲು ಒಪ್ಪಿಗೆ ನೀಡಿದೆ. ಕೋವಿಡ್‌-19 ಸೋಂಕಿನಿಂದ ತೀವ್ರತರವಾಗಿ ಬಳಲುತ್ತಿರುವವರ ತುರ್ತುಬಳಕೆಗಾಗಿ ಈ ಔಷಧವನ್ನು ಬಳಸಲು ಅಮೆರಿಕ ಮೊದಲು ಅನುಮತಿ ನೀಡಿತ್ತು.

ಅಮೆರಿಕದ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವ ಈ ಪ್ರಾಯೋಗಿಕ ಔಷಧ ಬಳಕೆಗೆ ಶೀಘ್ರವೇ ಜಪಾನ್‌ ಸರಕಾರ ಹಸಿರು ನಿಶಾನೆ ನೀಡಲಿದೆ. ಅಮೆರಿಕದಲ್ಲಿ ಇಂತಹ ಪ್ರಯೋಗಕ್ಕೆ ಭಾರತೀಯ ಮೂಲದ ವೈದ್ಯೆ ಅರುಣಾ ಸುಬ್ರಹ್ಮಣಿಯನ್‌ ಅವರು ಸೇರಿದಂತೆ ಇತರ ತಜ್ಞರು ಈ ಔಷಧವನ್ನು ಚಿಕಿತ್ಸೆ ನೀಡಲು ಬಳಸಬಹುದು ಎಂದು ಶಿಫಾರಸು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next