Advertisement

ವಿಮಾನ ನಿಲ್ದಾಣದಲ್ಲಿ ಸೇವೆ ತಾತ್ಕಾಲಿಕ ಸ್ಥಗಿತ

12:59 PM Mar 25, 2020 | Suhan S |

ಬೆಂಗಳೂರು: ಕೋವಿಡ್ 19 ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಳ್ಳಲಿದೆ. ಈಗಾಗಲೇ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹೊರಗಡೆಯಿಂದ ಅದರಲ್ಲೂ ವಿಶೇಷವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರಿಂದ ವೈರಸ್‌ ಹರಡುತ್ತಿರುವುದು ಕಂಡುಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರದ ಸೂಚನೆ ಮೇರೆಗೆ ನಾಗರಿಕ ವಿಮಾನಯಾನ ಸೇವೆಯನ್ನು ಬಂದ್‌ ಮಾಡಲು ನಿರ್ಧರಿಸಲಾಗಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ. ತಾತ್ಕಾಲಿಕವಾಗಿ ಮಂಗಳವಾರ ಮಧ್ಯರಾತ್ರಿ 12ರಿಂದ ಮಾರ್ಚ್‌ 31ರ ಮಧ್ಯರಾತ್ರಿ 12ರವರೆಗೆ ಸೇವೆ ಸ್ಥಗಿತಗೊಳ್ಳಲಿದೆ. ಏಪ್ರಿಲ್‌ನಿಂದ 1ರಿಂದ ಸೇವೆ ಪ್ರಾರಂಭಿಸುವ ಚಿಂತನೆ ನಡೆದಿದೆ. ಇನ್ನು ಕಾರ್ಗೋ ವಿಮಾನ ಸೇವೆ ಎಂದಿನಂತೆ ಇರಲಿದೆ. ಔಷಧ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಸರಕು ಸಾಗಣೆಗಾಗಿ ಈ ಸೇವೆ ಮುಂದುವರಿಸಲಾಗಿದೆ ಎಂದು ಬಿಐಎಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next