Advertisement

ಅಯೋಧ್ಯೆಯಲ್ಲಿ ತಾತ್ಕಾಲಿಕ ದೇಗುಲ : 25ರಂದು ಲೋಕಾರ್ಪಣೆ

10:20 AM Mar 17, 2020 | sudhir |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮನ ಪೂಜೆಗಾಗಿ ಹೊಸ ಪುಟ್ಟ ದೇಗುಲ ವೊಂದನ್ನು ನಿರ್ಮಿಸಲಾಗಿದೆ. ಸದ್ಯದಲ್ಲೇ ಇಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸ ಲಾಗುತ್ತದೆ. ಮಾ.25ರಂದು ಮೂರ್ತಿಗೆ ಮೊದಲ ಪೂಜೆ ಸಲ್ಲಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ದೇಗುಲದ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ.

Advertisement

ಗುಂಡು ನಿರೋಧಕ ದೇಗುಲ!
ಈ ಪುಟ್ಟ ದೇಗುಲವನ್ನು ಹೊಸದಿಲ್ಲಿಯಲ್ಲಿ ನಿರ್ಮಿಸಿ ಅಯೋಧ್ಯೆಗೆ ತರಲಾಗಿದೆ! ಇದನ್ನು ಬುಲೆಟ್‌ ಪ್ರೂಫ್ ಫೈಬರ್‌ ಸಾಮಗ್ರಿಯಿಂದ ನಿರ್ಮಿಸಲಾಗಿದೆ. ಇದು ಅಗ್ನಿ ಮತ್ತು ಜಲ ನಿರೋಧಕವೂ ಆಗಿದೆ. ಹವಾನಿಯಂತ್ರಿತ ವ್ಯವಸ್ಥೆಯೂ ಇಲ್ಲಿದೆ ಎನ್ನಲಾಲಾಗಿದೆ.

27 ವರ್ಷಗಳ ಅನಂತರ ಪೂಜೆ
ದಶಕಗಳ ಹಿಂದೆ ವಿವಾದಿತ ಬಾಬರಿ ಕಟ್ಟಡದಲ್ಲಿದ್ದ ರಾಮಲಲ್ಲಾ ವಿಗ್ರಹವನ್ನು 1992ರಲ್ಲಿ ನಡೆದಿದ್ದ ಗಲಭೆಯ ಹಿನ್ನೆಲೆಯಲ್ಲಿ ಹತ್ತಿರದಲ್ಲೇ ಇದ್ದ ತಾತ್ಕಾಲಿಕ ಟೆಂಟ್‌ನಲ್ಲಿ ಇರಿಸಿ ಪೂಜಿಸಲಾಗುತ್ತಿತ್ತು. ಅದಾಗಿ, 27 ವರ್ಷಗಳ ಅನಂತರ ಈಗ ಆ ಮೂರ್ತಿಗೆ ದೇಗುಲದಲ್ಲಿ ಪೂಜೆಗೊಳ್ಳುವ ಅವಕಾಶ ಸಿಗಲಿದೆ.

ರಾಮನವಮಿ ಮೇಳಕ್ಕೆ ವೈರಸ್‌ ಭೀತಿ
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ, ಸಾವಿರಾರು ವರ್ಷಗಳಿಂದ ಅಯೋಧ್ಯೆಯಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ರಾಮನವಮಿ ಮೇಳ ಈ ಬಾರಿ ರದ್ದಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next