Advertisement
ಈ ರಸ್ತೆಯಲ್ಲಿ ಮಳೆಗಾಲ ಬಳಿಕ ಗುಂಡಿಗಳು ಉಂಟಾಗಿದ್ದು, ಸಂಚಾರ ಪ್ರಯಾಸವಾಗಿತ್ತು. ಈ ಬಗ್ಗೆ ಉದಯವಾಣಿ ಸುದಿನ ಅ. 30ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ರಸ್ತೆ ದುರಸ್ತಿಗೊಳಿಸುವಂತೆ ಅಧಿಕಾರಿಗಳಲ್ಲಿ ವಿನಂತಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಈ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ 5 ಕೋ. ರೂ. ಅನುದಾನ ಬಿಡುಗಡೆಗೊಳಿಸಿದ್ದು, ಬಳಿಕ ತಾಂತ್ರಿಕ ಕಾರಣದಿಂದ ರದ್ದು ಗೊಂಡಿತ್ತು.
ಪ್ರಸ್ತುತ ತಾತ್ಕಾಲಿಕವಾಗಿ ದುರಸ್ತಿ ನಡೆಯುತ್ತಿದೆ. ಭಾರತ್ ಮಾಲಾ ಯೋಜನೆಯಲ್ಲಿ ರಸ್ತೆ ಮೇಲ್ದರ್ಜೆಗೇರಲಿದ್ದು, ಸರ್ವೆ ನಡೆದಿದ್ದು, ಅನುಮೋದನೆ ದೊರಕಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
– ಉಮೇಶ್ ಭಟ್
ಲೋಕೋಪಯೋಗಿ
ಕಾರ್ಯನಿರ್ವಾಹಕ ಅಭಿಯಂತರು