Advertisement

ವೈದ್ಯರ ಕಾರ್ಯವೈಖರಿಗೆ ತಾಪಂ ಸದಸ್ಯರ ಆಕ್ರೋಶ

09:56 AM Jun 24, 2020 | Suhan S |

ಹೊಸದುರ್ಗ: ಸಾಮಾಜಿಕ ಹಾಗೂ ಆರೋಗ್ಯ ಜಾಗೃತಿ ಮೂಡಿಸಬೇಕಾದ ವೈದ್ಯರೇ ಆಸ್ಪತ್ರೆಗಳಲ್ಲಿನರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಆರೋಪಗಳ ಸುರಿಮಳೆಯೇ ಕೇಳಿ ಬಂತು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಸುಮಿತ್ರಾ ಮಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಮೇಲಿನ ಚರ್ಚೆ ವೇಳೆ ವೈದ್ಯಾಧಿಕಾರಿಗಳ ವರ್ತನೆ ಬಗ್ಗೆ ಸದಸ್ಯರಿಂದ ಅಸಮಾಧಾ° ವ್ಯಕ್ತವಾಯಿತು. ವೈದ್ಯರು ರೋಗಿಗಳನ್ನು ಮುಟ್ಟದೆ ಚಿಕಿತ್ಸೆ ನೀಡುತ್ತಾರೆ, ದೂರದಲ್ಲಿ ನಿಲ್ಲಿಸಿ ಮಾತ್ರೆಗಳನ್ನು ಎಸೆಯುತ್ತಾರೆ. ಇಂತಹ ಅವ್ಯವಸ್ಥೆ ಕುರಿತು ಐದು ವರ್ಷಗಳಿಂದ ಹೇಳಿದರೂ ಏನೂ ಪ್ರಯೋಜನವಾಗಿಲ್ಲ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಾಪಂ ಉಪಾಧ್ಯಕ್ಷೆ ನೇತ್ರಾವತಿ ದೇವರಾಜ್‌ ಆರೋಪಿಸಿದರು.

ಸದಸ್ಯೆ ಪ್ರೇಮಾ ರವೀಂದ್ರ ಮಾತನಾಡಿ, ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರೇ ನಿತ್ಯ ಕುಡಿದು ಬರುತ್ತಿದ್ದು, ಆಸ್ಪತ್ರೆಯಲ್ಲೇ ಕುಡಿಯುವ ಚಾಳಿ ಶುರು ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ನರ್ಸ್‌, ಆಶಾ ಕಾರ್ಯಕರ್ತೆಯರು, ರೋಗಿಗಳ ಮೇಲೆ ಗಲಾಟೆ ಮಾಡುತ್ತಾರೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ವೈದ್ಯರಿಂದ ಸಾಮಾಜಿಕ ವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ ಎಂದು ಹರಿ ಹಾಯ್ದರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನಿರಂಜನಮೂರ್ತಿ, ಮತ್ತೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ತಿಂಗಳಿನಿಂದ ಮೆಡಿಸಿನ್‌ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ದೂರಿದರು.

ಕೆಲ್ಲೋಡು ಕ್ಷೇತ್ರದ ಸದಸ್ಯೆ ಪ್ರೇಮಾ ಮಾತನಾಡಿ, ಬೆಂಗಳೂರಿನಲ್ಲಿ ಕೋವಿಡ್  ವೈರಸ್‌ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಇದೇ ಸಂದರ್ಭದಲ್ಲಿ ಪ್ರತಿನಿತ್ಯ ಹಳ್ಳಿಗಳಿಂದ ಬೆಂಗಳೂರಿಗೆ ಹೋಗಿ ವಾಪಸ್‌ ಬರುವವರ ಸಂಖ್ಯೆಯಲ್ಲೂ ಜಾಸ್ತಿಯಾಗಿದ್ದು, ತಾಲೂಕು ಆಡಳಿತ ಅವರನ್ನುತಡೆ ಹಿಡಿಯುವ ಕೆಲಸ ಮಾಡಬೇಕುಎಂದು ಆಗ್ರಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಜಯಪ್ಪ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆ ಪ್ರಾರಂಬಿಸಲು ಇಲಾಖೆ ಅನುಮತಿ ನೀಡಿದೆ. ತಾಲೂಕಿನ ಸಣ್ಣಕಿಟ್ಟದಹಳ್ಳಿ, ಕಂಗುವಳ್ಳಿ, ಲಕ್ಕಿಹಳ್ಳಿ, ದೊಡ್ಡತೇಕಲವಟ್ಟಿ ಗೂಳಿಹಟ್ಟಿ ಸೇರಿದಂತೆ 10 ಗ್ರಾಮಗಳಲ್ಲಿ ಶಾಲೆ ಆರಂಭಿಸಲಾಗುವುದು ಎಂದರು.

ಮತ್ತೋಡು ಗ್ರಾಮದಲ್ಲಿ ಕಳೆದ ವರ್ಷ ದುರಸ್ತಿ ಮಾಡಲಾಗಿದ್ದ ಅಂಗನವಾಡಿ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸಲಾಗಿದೆ. ಉತ್ತಮವಾಗಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟುವ ಅಗತ್ಯವಾದರೂ ಏನಿತ್ತು. ಇದೇ ಅನುದಾನ ಬಳಸಿ ಹೊಸ ಕಟ್ಟಡ ನಿರ್ಮಿಸಬಹುದಾಗಿತ್ತು ಎಂದು ಸದಸ್ಯ ನಿರಂಜನಮೂರ್ತಿ, ಸಿಡಿಪಿಒ ಪವಿತ್ರಾ ಅವರನ್ನು ತರಾಟೆಗೆತೆಗೆದುಕೊಂಡರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್‌, ಇಒ ಜಾನಕಿರಾಮ್‌, ಸದಸ್ಯರಾದ ಐಲಾಪುರ ಮಲ್ಲಿಕಾರ್ಜುನ್‌, ಪ್ರಫುಲ್ಲಾ, ಬಸವರಾಜ್‌, ಶಶಿಕಲಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next