Advertisement

ಕರ್ಜಗಿ-ಸವಣೂರು ಮಧ್ಯ ರೈಲುಗಳಿಗೆ ತಾತ್ಕಾಲಿಕ ಬ್ರೇಕ್‌

12:15 PM Jul 27, 2018 | |

ಹುಬ್ಬಳ್ಳಿ: ಕರ್ಜಗಿ-ಸವಣೂರು ರೈಲು ನಿಲ್ದಾಣಗಳ ನಡುವೆ ಲೈನ್‌ ಬ್ಲಾಕ್‌ ತಾಂತ್ರಿಕ ಕೆಲಸ ಸೋಮವಾರ ಹೊರತುಪಡಿಸಿ ಜು.31ರವರೆಗೆ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ತಾಸುಗಳ ಕಾಲ ನಡೆಯುವುದರಿಂದ ಕೆಲ ರೈಲುಗಳ ಸಂಚಾರ ನಿಯಂತ್ರಿಸಲಾಗುವುದು.

Advertisement

ಕೆಎಸ್‌ಆರ್‌ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್‌ (56913) ರೈಲನ್ನು 47 ನಿಮಿಷ ಕರ್ಜಗಿಯಲ್ಲಿ ಹಾಗೂ ಹುಬ್ಬಳ್ಳಿ-ಅರಸಿಕೆರೆ ಪ್ಯಾಸೆಂಜರ್‌ (56274) ರೈಲನ್ನು ಸವಣೂರ ನಿಲ್ದಾಣದಲ್ಲಿ 40 ನಿಮಿಷ ತಡೆ ಹಿಡಿಯಲಾಗುವುದು.

ಕಂಟೋನ್ಮೆಂಟ್‌ನಿಂದ ರೈಲು ಸಂಚಾರ: ಡೀಸೆಲ್‌ ಇಲೆಕ್ಟ್ರಿಕ್‌ ಮಲ್ಟಿ ಯುನಿಟ್‌ (ಡೆಮು) ರೈಲುಗಳ ಸಂಚಾರವನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಜು. 28ರಿಂದ ಆರಂಭಿಸಲಾಗುವುದು.

ಬಂಗಾರಪೇಟ-ಕೆಎಸ್‌ಆರ್‌ ಬೆಂಗಳೂರು ಡೆಮು (76508) ರೈಲನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಮಧ್ಯಾಹ್ನ 3:30 ಗಂಟೆಗೆ ಬಂಗಾರಪೇಟೆಯಿಂದ ಹೊರಟು ಸಂಜೆ 5:20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ ತಲುಪಲಿದೆ.

ಕೆಎಸ್‌ಆರ್‌ ಬೆಂಗಳೂರು-ಕೋಲಾರ ಡೆಮು (76551) ರೈಲನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಆರಂಭಿಸಲಾಗುವುದು. ಈ ರೈಲು ಬೆಳಗ್ಗೆ 8:40 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಕೋಲಾರ ತಲುಪಲಿದೆ.

Advertisement

ಕೋಲಾರ-ಕೆಎಸ್‌ಆರ್‌ ಬೆಂಗಳೂರು ಡೆಮು (76552) ರೈಲನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಕೋಲಾರದಿಂದ ಮಧ್ಯಾಹ್ನ 1:45 ಗಂಟೆಗೆ ಹೊರಟು ಬೆಂಗಳೂರು ಕಂಟೋನ್ಮೆಂಟ್‌ನ್ನು ಸಂಜೆ 5:45 ಗಂಟೆಗೆ ತಲುಪಲಿದೆ.

ಕೆಎಸ್‌ಆರ್‌ ಬೆಂಗಳೂರು-ಧರ್ಮಾಪುರಿ ಡೆಮು (76553) ರೈಲನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಆರಂಭಿಸಲಾಗುವುದು. ಈ ರೈಲು ಸಂಜೆ 6:25 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು ರಾತ್ರಿ 9:40 ಗಂಟೆಗೆ ಧರ್ಮಾಪುರಿ ತಲುಪಲಿದೆ.

ಧರ್ಮಾಪುರಿ-ಕೆಎಸ್‌ಆರ್‌ ಬೆಂಗಳೂರು ಡೆಮು (76554) ರೈಲನ್ನು ಕೆಎಸ್‌ಆರ್‌ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಬೆಳಗಿನ ಜಾವ 5 ಗಂಟೆಗೆ ಧರ್ಮಾಪುರಿಯಿಂದ ಹೊರಟು ಬೆಳಗ್ಗೆ 8 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next