Advertisement
ಅವಳಿ ನಗರ ತ್ವರಿತ ಸಾರಿಗೆ ವ್ಯವಸ್ಥೆಗೆ ವಾಯವ್ಯ ಸಾರಿಗೆ ಸಂಸ್ಥೆ ಅಡಿಯಲ್ಲೇ ಪ್ರತ್ಯೇಕ ನಗರ ವಿಭಾಗೀಯ ಕಚೇರಿ ಆರಂಭಿಸಿ, ಈ ಮೂಲಕ ನಿರ್ವಹಿಸುವುದು ಹಾಗೂ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸುವುದು ಹಿಂದಿನ ಸಭೆಗಳ ನಿರ್ಧಾರವಾಗಿತ್ತು. ಹೀಗಾಗಿಯೇ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸುವ ಬಸ್‌ಗಳ ಚಾಲನೆಗಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ಚಾಲಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
Related Articles
Advertisement
ಹೊಣೆಗಾರಿಕೆ ಇಲ್ಲ: ಬಿಆರ್‌ಟಿಎಸ್ ಇಷ್ಟೊಂದು ಸಂಖ್ಯೆಯಲ್ಲಿ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆ ಕೋರಿದ್ದು, ಈ ಸಿಬ್ಬಂದಿಗೆ ನೀಡಬೇಕಾದ ಹಿಂಬಾಕಿ ಹಾಗೂ ಬಾಕಿ ಉಳಿದಿರುವ ಸೌಲಭ್ಯಗಳ ಪಾವತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಈ ಸಿಬ್ಬಂದಿ ಹೊಣೆಗಾರಿಕೆ ವಾಯವ್ಯ ಸಾರಿಗೆ ಸಂಸ್ಥೆ ಮೇಲೆ ಬೀಳಲಿದೆ. ದುಡಿಯುವ ಸಿಬ್ಬಂದಿ, ವಾಹನಗಳು ಇಲ್ಲವಾದ ಮೇಲೆ ಸಿಬ್ಬಂದಿಯ ಬಾಕಿ ಕೊಡುವುದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆ. ಬಾಕಿ ಉಳಿದ ಸೌಲಭ್ಯಗಳನ್ನು ಪಡೆಯಲು ದೊಡ್ಡ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಬಿಆರ್‌ಟಿಎಸ್ ಸಂಸ್ಥೆಗೆ ಹೋದರೆ ನಮ್ಮ ಬಾಕಿ ಪಾವತಿಗೆ ಪಂಗನಾಮ ಎನ್ನುವ ಆತಂಕ ವಾಕರಸಾ ಸಿಬ್ಬಂದಿಯದ್ದು.
ನೇಮಕಾತಿಗೆ ಒಲವು: ಪ್ರತ್ಯೇಕ ಸಂಸ್ಥೆ ಮಾಡಿದರೆ ಲಾಭ ಗಳಿಸಬಹುದೆಂಬ ನಿರೀಕ್ಷೆಯಲ್ಲಿ ಬಿಆರ್‌ಟಿಎಸ್ ಅಧಿಕಾರಿಗಳು ಇದ್ದಂತೆ ಕಾಣುತ್ತಿದೆ. ಆದರೆ ರಾಜ್ಯ ಸಾರಿಗೆ ಇತಿಹಾಸದಲ್ಲಿ ಸರಕಾರಿ ಒಡೆತನದ ಸಂಸ್ಥೆಗಳು ಲಾಭ ಗಳಿಸಿದ ಉದಾಹರಣೆಗಳಿಲ್ಲ. ಆದರೆ ಪ್ರತ್ಯೇಕ ನಿಗಮದ ಪ್ರಸ್ತಾವನೆಗೆ ಮುಂದಾಗಿರುವ ಬಿಆರ್ ಟಿಎಸ್ ಕೇಂದ್ರ ಕಚೇರಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಹೊಸ ಹುದ್ದೆಗಳಾದ ಎಂಡಿ, ಹಣಕಾಸು, ಕಾನೂನು, ಸಂಚಾರ, ತಾಂತ್ರಿಕ, ಕಾಮಗಾರಿ, ಆಡಳಿತ ಸೇರಿದಂತೆ 13 ಶಾಖೆಗಳಿಗೆ ದೊಡ್ಡ ಸಂಬಳದ ಹಿರಿಯ ಅಧಿಕಾರಿಗಳು ಹಾಗೂ ಆಡಳಿತಾತ್ಮಕ ಸಿಬ್ಬಂದಿ ನೇಮಕಕ್ಕೆ ಒತ್ತು ನೀಡಿದಂತಿದೆ. ಪ್ರತ್ಯೇಕ ನಿಗಮ ಸರಕಾರಕ್ಕೆ ಹೆಚ್ಚುವರಿ ಹೊರೆ ವಿನಃ ಲಾಭ ದೂರದ ಮಾತು ಎಂಬುದು ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರ ಅಭಿಪ್ರಾಯ.
ಪ್ರತ್ಯೇಕ ನಿಗಮಕ್ಕೆ ಮಹಾಮಂಡಳ ಎಂದಿಗೂ ಬೆಂಬಲ ನೀಡುವುದಿಲ್ಲ. ಯಾವುದೇ ಕರಾರು ಇಲ್ಲದೆ ಯಥಾಸ್ಥಿತಿಯಲ್ಲಿ ಸಂಸ್ಥೆ ಆಸ್ತಿ ಬಿಟ್ಟುಕೊಡಬೇಕು ಎಂದು ಕೇಳುವ ಬಿಆರ್‌ಟಿಎಸ್ ಕಂಪೆನಿ, ಸಿಬ್ಬಂದಿ ವಿಚಾರದಲ್ಲಿ ಕರಾರುಗಳನ್ನಿಟ್ಟಿರುವುದು ಮುಂದಿನ ಖಾಸಗೀಕರಣದ ಸುಳಿವು ನೀಡುತ್ತವೆ. ಜು.4ರಂದು ನಡೆಯುವ ಮಹಾಮಂಡಳದ ಸಾಮಾನ್ಯ ಸಭೆಯಲ್ಲಿ ಸಾರಿಗೆ ಸಂಸ್ಥೆ ಆಸ್ತಿ ವರ್ಗಾಯಿಸದಂತೆ ಠರಾವು ಪಾಸ್ ಮಾಡಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತೇವೆ.ಡಾ| ಕೆ.ಎಸ್. ಶರ್ಮಾ, ಕಾರ್ಮಿಕ ಹೋರಾಟಗಾರ ಹೇಮರಡ್ಡಿ ಸೈದಾಪುರ