Advertisement

ಟೆಂಪೋ ಚಾಲಕನ ಜೈಲು ಶಿಕ್ಷೆ ರದ್ದು ಮಾಡಿದ ದಿಲ್ಲಿ ಕೋರ್ಟ್‌

05:19 PM Oct 06, 2017 | Team Udayavani |

ಹೊಸದಿಲ್ಲಿ : ನಿರ್ಲಕ್ಷ್ಯಮತ್ತು ವೇಗದಿಂದ ವಾಹನವನ್ನು ಚಲಾಯಿಸಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಮತ್ತು ಇತರ ಮೂವರನ್ನು ಗಾಯಗೊಳಿಸಿದ್ದ ಆರೋಪದ ಮೇಲೆ ಟೆಂಪೋ ಚಾಲಕನಿಗೆ ಮ್ಯಾಜಿಸ್ಟ್ರೇಟರ ಕೋರ್ಟ್‌ ನೀಡಿದ್ದ 2 ವರ್ಷಗಳ ಸಶ್ರಮ ಜೈಲು ಶಿಕ್ಷೆಯನ್ನು ದಿಲ್ಲಿ ನ್ಯಾಯಾಲಯ ರದ್ದು ಮಾಡಿದೆ.

Advertisement

ಚಾಲಕ ಗಂಗಾ ಪ್ರಸಾದ್‌ ಎಂಬಾತ ನಡೆಸುತ್ತಿದ್ದ ಟೆಂಪೋದ ಟಯರ್‌ ಸ್ಫೋಟಗೊಂಡ ಪರಿಣಾಮವಾಗಿ ಆತನಿಗೆ ತನ್ನ ವಾಹನದ ಮೇಲಿನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆಯೇ ಹೊರತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಇದು ಆದದ್ದಲ್ಲ; ಇದು ಸಂಪೂರ್ಣವಾಗಿ ಮಾನವ ನಿಯಂತ್ರಣ ಮೀರಿದ ಅವಘಡವಾಗಿದೆ ಎಂದು ದಿಲ್ಲಿ ಸೆಶನ್ಸ್‌ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ವೃಂದಾ ಕುಮಾರಿ ತಮ್ಮ ತೀರ್ಪಿನಲ್ಲಿ ಹೇಳಿದರು. 

2002ರಲ್ಲಿ ಮೆಹರೋಲಿ ಸಮೀಪ ಗಂಗಾ ಪ್ರಸಾದ್‌ ಚಲಾಯಿಸುತ್ತಿದ್ದ ಟೆಂಪೋ ಟೈರ್‌ ಸ್ಫೋಟಗೊಂಡು ಅಪಘಾತಕ್ಕೆ ಗುರಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next