Advertisement

Temples: ಕರಾವಳಿಯ ದೇಗುಲಗಳಲ್ಲಿ ಭಕ್ತ ಸಂದಣಿ

11:56 PM Jan 14, 2024 | Team Udayavani |

ಬೆಳ್ತಂಗಡಿ/ಸುಬ್ರಹ್ಮಣ್ಯ, ಕೊಲ್ಲೂರು: ಮಕರ ಸಂಕ್ರಾಂತಿ ಪ್ರಯುಕ್ತ ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ ದೇಗುಲ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲಕ್ಕೆ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದರು.

ಶನಿವಾರ, ರವಿವಾರ ಸರಕಾರಿ ರಜೆಯಾಗಿದ್ದು, ಇದೇ ಅವಧಿಯಲ್ಲಿ ಸಂಕ್ರಾಂತಿ ಹಬ್ಬವೂ ಬಂದಿದ್ದರಿಂದ ಭಕ್ತರ ಸಂಖ್ಯೆ ದ್ವಿಗುಣವಾಗಿತ್ತು. ಸೋಮವಾರ ಶಿವನ ವಿಶೇಷ ಆರಾಧನಾ ದಿನಾವಾಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಹೆಚ್ಚುವರಿ ಬಸ್‌ ಸೇವೆ ಒದಗಿಸಲಾಗಿದೆ. ಭಕ್ತರು ಸರತಿಸಾಲಿನಲ್ಲಿ ನಿಂತು ರಾತ್ರಿವರೆಗೂ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.

ಕೊಲ್ಲೂರು: ದಾಖಲೆಯ ಭಕ್ತಸಮೂಹ
ಕೊಲ್ಲೂರು: ಕೊಲ್ಲೂರು ಹಾಗೂ ಮಾರಣಕಟ್ಟೆ ದೇಗುಲದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ಶ್ರೀ ದೇವರ ದರ್ಶನ ಪಡೆದಿದ್ದಾರೆ. ಕೊಲ್ಲೂರಿಗೆ 10 ಸಾವಿರಕ್ಕೂ ಮಿಕ್ಕಿದ ಭಕ್ತರು ಆಗಮಿಸಿದ್ದರು. ಅಯ್ಯಪ್ಪ ವ್ರತಧಾರಿಗಳು, ಶಾಲಾ ಮಕ್ಕಳು ಅಲ್ಲದೇ ವಿವಿಧ ಜಿಲ್ಲೆ, ರಾಜ್ಯಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರ ಆಗಮನದಿಂದಾಗಿ ದೇಗುಲದ ವಸತಿಗೃಹ ಸಹಿತ ಖಾಸಗಿ ವಸತಿಗೃಹಗಳೆಲ್ಲ ತುಂಬಿದ್ದವು.

ಮಾರಣಕಟ್ಟೆ ದೇಗುಲ
ಇಂದು ಮಕರಸಂಕ್ರಮಣ
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ. 15ರಂದು ಆರಂಭಗೊಳ್ಳಲಿರುವ ಮಕರಸಂಕ್ರಣದ ವಿವಿಧ ಸೇವೆಗಳಿಗೆ ಸಕಲ ಸಿದ್ಧತೆ ನಡೆದಿದೆ. ಉಡುಪಿ, ಕುಂದಾಪುರ, ಬೈಂದೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗದಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next