Advertisement

‘ಹೋರಿ ಕಂಡರೆ ಹೇಳಿಬಿಡಿ’; ಶಿವಮೊಗ್ಗ ಉಜ್ಜನೇಶ್ವರ ದೇವಸ್ಥಾನದ ಮೂರು ಹೋರಿಗಳು ನಾಪತ್ತೆ!

02:30 PM Apr 29, 2022 | Team Udayavani |

ಶಿವಮೊಗ್ಗ: ಪ್ರತಿದಿನ ಗ್ರಾಮದ ಪ್ರತಿ ಮನೆಗಳ ಮುಂದೆ ಲಂಗುರು ಹಾಕುತ್ತಿದ್ದ ಹೋರಿಗಳು ಈಗ ಬರುತ್ತಿಲ್ಲ. ಆಗಾಗ ಹೊಲಗದ್ದೆಗಳಿಗೆ ಲಗ್ಗೆಯಿಡುತ್ತಿದ್ದ ದೇವರ ಹೋರಿಗಳು ಈಗ ಕಾಣ ಸಿಗುತ್ತಿಲ್ಲ. ದೇವಸ್ಥಾನದ ಹೋರಿಗಳು ಈ ರೀತಿ ಗ್ರಾಮದಿಂದ ಕಾಣೆಯಾದ ಬಗ್ಗೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ದೇವರ ಹೋರಿಗಳು ಹೋಗಿದ್ದಾದರು ಎಲ್ಲಿಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ.

Advertisement

ಹೌದು, ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಗ್ರಾಮದ ಶ್ರೀ ಉಜ್ಜನೇಶ್ವರ ದೇವಸ್ಥಾನಕ್ಕೆ ದೇವರಿಗಾಗಿ ಬಿಟ್ಟಿದ್ದ ಗ್ರಾಮದ ಮೂರು ಬಸವಣ್ಣ ಹೆಸರಿನ ಹೋರಿಗಳು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದೆ. ದೇವರಿಗೆ ಬಿಟ್ಟ ಹೋರಿಗಳನ್ನು ಗ್ರಾಮದಲ್ಲಿ ಯಾರು ಕಟ್ಟಿ ಹಾಕುವಂತಿಲ್ಲ. ಹೀಗಾಗಿ ಗ್ರಾಮದಲ್ಲಿ ಸ್ವಚ್ಚಂದವಾಗಿ ಹೋರಿಗಳು ವಿಹರಿಸುತ್ತಿದ್ದವು. ಹೊಲಗದ್ದೆಗಳಿಗೆ ಲಗ್ಗೆ ಇಟ್ಟರೂ ದೇವರ ಹೋರಿಗಳೆಂದು ಗ್ರಾಮಸ್ಥರು ಓಡಿಸುತ್ತಿದ್ದರೂ, ಬಿಟ್ಟರೆ ಅದನ್ನು ಹೊಡೆಯಲು ಕೂಡ ಹೋಗುತ್ತಿರಲಿಲ್ಲ.

ಇದನ್ನೂ ಓದಿ:ಮಸ್ಕ್ ಟ್ವೀಟರ್ ಖರೀದಿ ಬೆನ್ನಲ್ಲೇ ಟೆಸ್ಲಾದ 3.99 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರಾಟ

ಗ್ರಾಮದ ಜನರ ಅಚ್ಚುಮೆಚ್ಚಾಗಿದ್ದ ಬಸವಣ್ಣ ಹೋರಿಗಳು ನಾಲ್ಕು ದಿನಗಳಿಂದ ಕಾಣೆಯಾಗಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ದೇವರ ಹೋರಿಗಳನ್ನು ಯಾರಾದ್ರೂ ಗೋ ಕಳ್ಳರು ಕದ್ದಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದ್ದರೂ, ನಮ್ಮ ಹೋರಿಗಳು ಇಲ್ಲೆ ಎಲ್ಲೋ ಹೋಗಿವೆ, ಇಂದಲ್ಲ ನಾಳೆ ಹೋರಿಗಳು ಗ್ರಾಮಕ್ಕೆ ವಾಪಸ್ಸಾಗಬಹುದೆಂಬ ಆಶಾವಾದದಲ್ಲಿ ಗ್ರಾಮಸ್ಥರಿದ್ದಾರೆ.

Advertisement

ಈ ಹಿಂದೆ ಅಕ್ಕಪಕ್ಕದ ಹಳ್ಳಿಗಳ ಹೊಲಗದ್ದೆಗಳಿಗೆ ಈ ಹೋರಿಗಳು ಹೋಗಿದ್ದಾಗ, ಗ್ರಾಮಸ್ಥರಿಗೆ ವಿಷಯ ತಿಳಿದು ಗ್ರಾಮಕ್ಕೆ ಕರೆತಂದಿದ್ದರು. ಆದರೆ ಈ ಬಾರಿ ನಾಲ್ಕು ದಿನಗಳಾದರೂ, ಗ್ರಾಮಕ್ಕೆ ಹೋರಿಗಳು ಬಾರದಿರುವುದರಿಂದ ಗ್ರಾಮಸ್ಥರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ದೇವರ ಹೋರಿಗಳ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ‘ಯಾರಿಗಾದರೂ ಹೋರಿ ಕಂಡು ಬಂದರೆ ತಿಳಿಸಿ’ ಎಂದು ದೇವಸ್ಥಾನದ ಮುಖಂಡರು ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ.

ಜಗದೀಶ್-9008281995, ರಂಗಪ್ಪ- 9632515405

Advertisement

Udayavani is now on Telegram. Click here to join our channel and stay updated with the latest news.

Next