Advertisement

ದೇಗುಲಗಳು ಖಾಸಗಿ ಸ್ವತ್ತು ಅಲ್ಲ: ಸ್ಟ್ಯಾಲಿನ್

08:12 PM Dec 04, 2022 | Team Udayavani |

ಚೆನ್ನೈ: ದೇಗುಲಗಳು ಜನರಿಗೆಂದೇ ಇರುವುದು. ಅವುಗಳು ಯಾರ ಖಾಸಗಿ ಆಸ್ತಿಯೂ ಅಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಹೇಳಿದ್ದಾರೆ.

Advertisement

ರಾಜ್ಯ ಸರ್ಕಾರದ ಮುಜರಾಯಿ ಖಾತೆ, ದೇಗುಲಗಳ ಅಭಿವೃದ್ಧಿಗಳಿಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ ಅರ್ಚಕರ ಹುದ್ದೆಗೆ ಎಲ್ಲಾ ಜಾತಿಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಿಸಲಾಗುತ್ತದೆ. ಇಂಥ ಕ್ರಮಗಳನ್ನು ಸಹಿಸದ ಕೆಲವರು ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಪ್ರಭುತ್ವವಾದರೂ, ಪ್ರಜಾಪ್ರಭುತ್ವವಾದರೂ ಜನರಿಗಾಗಿಯೇ ದೇಗುಲಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಖಾಸಗಿ ಆಸ್ತಿಯಂತೆ ಬಳಕೆ ಮಾಡಲು ಸಾಧ್ಯವಿಲ್ಲವೆಂದರು. 3,700 ಕೋಟಿ ರೂ. ಮೌಲ್ಯದ ದೇಗುಲಗಳ ಆಸ್ತಿಯನ್ನು ಮತ್ತೆ ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next