Advertisement

ದಿವಂಗತ ತಾಯಿಯ ಮೂರ್ತಿಗೆ ನಿತ್ಯವು ಪುತ್ರಿಯ ನಮನ

05:12 PM Oct 14, 2021 | Team Udayavani |

ಮಾನ್ವಿ: ಪಟ್ಟಣದ ವೈದ್ಯೆ ಡಾ.ಪ್ರಜ್ಞಾ ಹರಿಪ್ರಸಾದ್ ತಮ್ಮ ತಾಯಿ ದಿ.ಡಾ. ವನಿತಾ ಪ್ರಭಾಕರ ಅವರಿಗೆ ದೇವಸ್ಥಾನವನ್ನು ಕಟ್ಟಿ ನಿತ್ಯ ಪೂಜೆಸಲ್ಲಿಸುವುದಲ್ಲದೆ ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡುವ ಮೂಲಕ ಮಾತೃದೇವೊಭವ ಎನ್ನುವ ಮಾತಿಗೆ ಸಾರ್ಥಕತೆಯನ್ನು ತಂದು ಕೊಟ್ಟಿದ್ದಾರೆ

Advertisement

ದಿ.ಡಾ.ಪ್ರಭಾಕರ ಹಾಗೂ ದಿ.ಡಾ.ವನಿತಾ ಪ್ರಭಾಕರ ದಂಪತಿಗಳು ಕಳೆದ ಹಲವು ದಶಕಗಳಿಂದ ಮಾನ್ವಿ ಪಟ್ಟಣದಲ್ಲಿ ವೈದ್ಯ ವೃತ್ತಿ ಕೈಗೊಂಡು ತಾಲ್ಲೂಕಿನ ಗ್ರಾಮಾಂತರ ಜನರ ಹಲವು ಆರೋಗ್ಯ ಸಮಸ್ಯಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ತಾಲ್ಲೂಕಿನಲ್ಲಿ ಮನೆಮಾತಾಗಿದ್ದರು. ದಿ.ಡಾ. ವನಿತಾ ಪ್ರಭಾಕರ ಸ್ತ್ರೀರೋಗ ತಜ್ಞರಾಗಿ ಹೆರಿಗೆ ಸೇರಿದಂತೆ , ಅನೇಕ ಆರೋಗ್ಯ ಸಮಸ್ಯಗಳಿಗೆ ಸಾಂತಾನ ಸಫಲ್ಯತೆಗೆ ಪರಿಹಾರವನ್ನು ನೀಡುವ ಮೂಲಕ ತಮ್ಮ ಜೀವನವನ್ನು ರೋಗಿಗಳ ಸೇವೆಗೆ ಮುಡುಪಾಗಿಟ್ಟು ಮಹಿಳೆಯರ ಪಾಲಿಗೆ ತ್ಯಾಗಮಯಿ ತಾಯಿಯಂತೆ ಗುರುತಿಸಿ ಕೊಂಡಿದ್ದರು ಪ್ರತಿ ನಿತ್ಯ ನೂರಾರು ಮಹಿಳೆಯರು ಇವರ ಬಳಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದರು ಬಡ ಮಹಿಳೆಯರಿಗೆ ಉಚಿತವಾಗಿ ಔಷದಿಯನ್ನು ನೀಡುತ್ತಿದ್ದರು ತಮ್ಮ 40ನೇ ವಯಸ್ಸಿಗೆ 1996ರಲ್ಲಿ ದೈವದಲ್ಲಿ ಸೇರಿ ಕೊಂಡರು ಎಂದು ಹಿಂದಿಗೂ ಹಿರಿಯ ಮಹಿಳೆಯರು ನೆನಪಿಸಿ ಕೊಳ್ಳುತ್ತಾರೆ

ತಾಯಿಯ ಆದರ್ಶಗಳನ್ನು ತಮ್ಮಲ್ಲಿ ಆಳವಡಿಸಿ ಕೊಂಡಿರುವ ಇವರು ವೈದ್ಯಕೀಯ ಪದವಿ ಪಡೆದು ವೈದ್ಯೆ ಡಾ.ಪ್ರಜ್ಞಾಹರಿಪ್ರಸಾದ್ ತಾಯಿಯಂತೆ ಸ್ತ್ರೀರೋಗ ತಜ್ಞಯಾಗಿ ತಮ್ಮ ಪತಿ ಡಾ. ಹರಿಪ್ರಸಾದ ಶಸ್ತ್ರ ಚಿಕಿತ್ಸಾ ತಜ್ಞರು ಇವರೊಂದಿಗೆ ನಗರದಲ್ಲಿ ನೆಲೆಸಿ ತಾಯಿ ಹಾಕಿ ಕೊಟ್ಟ ಹಾದಿಯಂತೆ ರೋಗಿಗಳ ಆರೈಕೆ ಮಾಡುತ್ತ ಹಾಗೂ ತಾಯಿಯ ನೆನಪಿಗೆ ದಿ.ಡಾ.ಪ್ರಭಾಕರ ಹಾಗೂ ದಿ.ಡಾ. ವನಿತಾ ಪ್ರಭಾಕರ ಚಾರೀಟಬಲ್ ಟ್ರಸ್ಟ್ ರಚಿಸಿ ಕೊಂಡು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ

ಡಾ. ವನಿತಾ ಪ್ರಭಾಕರ ಮೆಮೋರಿಯಲ್ ಆಸ್ಪತ್ರೆ ಅವರಣ ಪ್ರವೇಶ ದ್ವಾರದಲ್ಲಿಯೇ ಡಾ. ವನಿತಾ ಪ್ರಭಾಕರ ರವರ ದೇವಸ್ಥಾನ ಕಟ್ಟಲಾಗಿದ್ದು ಡಾ. ವನಿತಾ ಪ್ರಭಾಕರ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದ್ದು ತಾಯಿಯ ಮೂರ್ತಿಗೆ ನಿತ್ಯವು ಪುತ್ರಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next