Advertisement

ದೇಗುಲ ಸ್ವತ್ಛತಾ ಅಭಿಯಾನ

03:10 PM Aug 10, 2018 | Team Udayavani |

ಸಿರುಗುಪ್ಪ: ದೇವಸ್ಥಾನದ ಪರಿಸರ ಹಾಗೂ ಸಮುದಾಯ ಭವನಗಳನ್ನು ಶುಚಿಯಾಗಿಸಿ, ಸ್ವತ್ಛಗೊಳಿಸುವ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇಲ್ಲಿನ ಪರಿಸರದಲ್ಲಿನ ಸ್ವತ್ಛತೆ ನೋಡಿ ಭಕ್ತಿಯಿಂದ ಕೆಲ ಸಮಯ ಜ್ಞಾನಾಸ್ತರಾಗಿ ನೆಮ್ಮದಿ ಕಂಡುಕೊಳ್ಳುವಂತ ವಾತಾವರಣ ನಿರ್ಮಿಸಬೇಕೆಂದು ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆರ್‌.ಭಾರತಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಶಾಲಿಗನೂರು ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿನ ದೇವಸ್ಥಾನವನ್ನು ನಮ್ಮ ಸಂಸ್ಥೆಯ ಸದಸ್ಯರು ಸ್ವತ್ಛಗೊಳಿಸುವ ಕಾರ್ಯವನ್ನು ನಡೆಸಲಿದ್ದಾರೆ. 

ದೇವಸ್ಥಾನದ ಪರಿಸರದಲ್ಲಿ ನಿರ್ಮಲ, ಪ್ರಶಾಂತ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು. ರಾರಾವಿ ಗ್ರಾಪಂ ಸದಸ್ಯೆ ಯಶೋಧ, ಮುಖಂಡ ಆರ್‌.ಶಿವಪ್ಪ, ಸೇವಾ ಪ್ರತಿನಿಧಿ ವಾಣಿಶ್ರೀ ಹಾಗೂ ಗ್ರಾಮದ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ಹುಲಿಕೆರೆ ಶ್ರೀಕಲ್ಲೇಶ್ವರ ದೇವಸ್ಥಾನದಲ್ಲಿ ಸ್ವತ್ಛ
ಕೂಡ್ಲಿಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹುಲಿಕೆರೆ ಗ್ರಾಮದ ಪ್ರಗತಿಬಂಧು ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಐತಿಹಾಸಿಕ ಶ್ರೀಕಲ್ಲೇಶ್ವರ ದೇವಸ್ಥಾನ ಮತ್ತು ಆವರಣದ ಪರಿಸರ ಸ್ವತ್ಛತಾ ಕಾರ್ಯ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಯೋಜನೆಯ ಕ್ಷೇತ್ರ ಮೇಲ್ವಿಚಾರಕ ರಮೇಶ್‌, ಚಾಲುಕ್ಯರ ಕಾಲದ ಆಡಳಿತಾವಧಿಯಲ್ಲಿ ನಿರ್ಮಿಸಲಾದ ಕಲ್ಲೇಶ್ವರ ದೇವಾಲಯವು ಐತಿಹಾಸಿಕ ಮಹತ್ವ ಪಡೆದಿದೆ. ಈ ದೇವಾಲಯವನ್ನು ಸಂರಕ್ಷಣಾ ದೃಷ್ಟಿಯಿಂದ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು ದುರಸ್ತಿ ಮಾಡಿಸಿದ ಕೀರ್ತಿ ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಸಲ್ಲುತ್ತದೆ. ಅವರು ಕೈಗೊಂಡ ಕಾರ್ಯಗಳಂತೆ ನಾವು ಇಂದು ದೇವಾಲಯ ಸ್ವತ್ಛತೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರ ಪರಸನಗೌಡ, ಸೇವಾ ಪ್ರತಿನಿಧಿ ಕಮಲಮ್ಮ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಮಂಜುನಾಥ್‌, ಒಕ್ಕೂಟದ ಅಧ್ಯಕ್ಷ ಕಲ್ಲೇಶಪ್ಪ, ಸೇರಿದಂತೆ ಸಂಘದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next