Advertisement
ದೇವಸ್ಥಾನಗಳನ್ನು ತೆರೆಯುವ ಸಂಬಂಧಪಟ್ಟು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದಾರೆ. ಶನಿವಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ಎಲ್ಲ ದೇವಸ್ಥಾನಗಳಿಗೆ ನೀಡಲಿದ್ದಾರೆ. ಆಯ್ದ ಕೆಲವು ಮಾರ್ಗಸೂಚಿಗಳು ಈ ಕೆಳಗಿನಂತಿವೆ.
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಜೂ. 8ರಿಂದ ಮುಕ್ತ ಅವಕಾಶ ಮಾಡಿ ಕೊಡಲಾಗುವುದೆಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಭಕ್ತರ ಕೊರೊನಾ ಸೋಂಕು ತಡೆಯುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ. ಕಟೀಲು: ಅನ್ನದಾನ ಸೇವೆ ಇಲ್ಲ
ಕಟೀಲು/ಕೊಲ್ಲೂರು: ಕಟೀಲು ಕೊಲ್ಲೂರು, ದೇವಸ್ಥಾನಗಳೂ ಸೋಮವಾರ ತೆರೆಯಲಿವೆ. ಆದರೆ ಕಟೀಲಿನಲ್ಲಿ ಸದ್ಯಕ್ಕೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ. ದೇವರ ದರ್ಶನದ ಹೊರತು ಯಾವುದೇ ಸೇವೆಗಳು ಇರುವುದಿಲ್ಲ. ಕೊಲ್ಲೂರಿನಲ್ಲಿ ಮೊದಲ ದಿನ ಅನ್ನದಾನ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
Related Articles
Advertisement
– 65 ವರ್ಷ ಪ್ರಾಯ ಮೀರಿದ ಹಿರಿಯರು, ಹತ್ತು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ದೇವಸ್ಥಾನಕ್ಕೆ ಬಾರದ ಸಹಕರಿಸಬೇಕೆಂದು ವಿನಂತಿಸಲಾಗಿದೆ.
-ದೇವಸ್ಥಾನಗಳ ಪ್ರವೇಶದ್ವಾರ ಮತ್ತು ಆವರಣಗಳನ್ನು ಸ್ಯಾನಿಟೈಸ್‌ನಿಂದ ಶುಚಿಗೊಳಿಸಬೇಕು.
– ಭಕ್ತರ ದೇಹದ ಉಷ್ಣಾಂಶ, ಆರೋಗ್ಯ ತಪಾಸಣೆ ಮಾಡಬೇಕು. ಕೈಗೆ ಸ್ಯಾನಿಟೈಸರ್ ಹಾಕಬೇಕು.
– ಮಾಸ್ಕ್ ಧರಿಸಿರಬೇಕು.
– ವೈರಾಣು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಮತ್ತು ವೀಡಿಯೋ ತುಣುಕುಗಳನ್ನು ಬಿತ್ತರಿಸಬೇಕು.
– ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು.
– ಪಾದರಕ್ಷೆಗಳನ್ನು ಈಗ ಇಡುವ ಸ್ಥಳಕ್ಕಿಂತಲೂ ದೂರದಲ್ಲಿ ಇಡಬೇಕು.
– ವಾಹನ ಪಾರ್ಕಿಂಗ್ ಪ್ರದೇಶಗಳಲ್ಲಿ ಮತ್ತು ಅಂಗಡಿಗಳಲ್ಲಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.
– ದೇವಸ್ಥಾನವನ್ನು ಪ್ರವೇಶಿಸುವಾಗ ಕೈಕಾಲು ತೊಳೆದು ಬರುವ ವ್ಯವಸ್ಥೆ ಮಾಡಬೇಕು.