Advertisement

ಪುರಿ ಜಗನ್ನಾಥನಿಗೆ ಕಸ್ತೂರಿಯ ಕೊರತೆ

08:15 AM Feb 11, 2018 | Team Udayavani |

ಪುರಿ: ಜಗನ್ನಾಥ ದೇಗುಲಕ್ಕೆ ನೇಪಾಳದ ರಾಜಮನೆತನವು ವರ್ಷಕ್ಕೆ ಮೂರು ಬಾರಿ ಒದಗಿಸುತ್ತಿದ್ದ ಕಸ್ತೂರಿ ಇನ್ನು ಲಭ್ಯವಾಗುವುದಿಲ್ಲ ಎಂದು ನೇಪಾಳದ ರಾಜ ಜ್ಞಾನೇಂದ್ರ ಬೀರ್‌ ಬಿಕ್ರಮ್‌ ಹೇಳಿದ್ದಾರೆ. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪುರಿಗೆ ಆಗಮಿಸಿರುವ ರಾಜ ಈ ಹೇಳಿಕೆ ನೀಡಿದ್ದಾರೆ. ನೇಪಾಳದಲ್ಲಿ ಕಸ್ತೂರಿ ಜಿಂಕೆಯನ್ನು ಹತ್ಯೆಗೈಯುವುದನ್ನು ನಿರ್ಬಂಧಿಸಲಾಗಿದೆ. 

Advertisement

ಶತಮಾನಗಳಿಂದಲೂ ನೇಪಾಳದ ರಾಜಮನೆತನ ಕಸ್ತೂರಿಯನ್ನು ಪುರಿ ಜಗನ್ನಾಥನಿಗೆ ಒದಗಿಸುತ್ತಿತ್ತು. 2008ರ ನಂತರ ಕಸ್ತೂರಿಯ ಕೊರತೆ ಕಾಣಿಸಿಕೊಂಡಿದ್ದು, ಈ ಹಿಂದೆ ಹಲವು ಬಾರಿ ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯಕ್ಕೆ ವಿನಂತಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next