ಶಾಂತಿ, ನೆಮ್ಮದಿ ಪಡೆಯಲು, ಬಿಸಿಲು, ಮಳೆಯನ್ನು ತಡೆಯಲು ದೇಗುಲ ನಿರ್ಮಿಸಲಾಗುತ್ತದೆ ಎಂದು ಎಡನೀರು
ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು.
Advertisement
ಅವರು ಶುಕ್ರವಾರ ಬಾಕ್ರಬೈಲು ಸಮೀಪದ ಪಾತೂರು ಶ್ರೀ ಸೂಯೇìಶ್ವರ ದೇವಸ್ಥಾನದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಗಣಪತಿ ಸಹಿತ ಶ್ರೀ ಸೂಯೇìಶ್ವರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಹಾಗೂ ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಜಾತ್ರೆಯದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಗಿಸುತ್ತಾನೆ. ಭಕ್ತಿ, ಪರಿಶುದ್ಧ ಮನಸ್ಸಿನಿಂದ ಸಮರ್ಪಿಸಿದ್ದೆಲ್ಲ ವನ್ನೂ ಭಗವಂತನು ಸ್ವೀಕರಿಸಿ, ಪ್ರಸಾದ ರೂಪದಲ್ಲಿ ನೀಡುತ್ತಾನೆ ಎಂದರು. ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಮಾನಾಥ ಹೆಗ್ಡೆ, ಶ್ರೀ ಕ್ಷೇತ್ರ ಬಪ್ಪನಾಡು ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ ಕಕ್ವಗುತ್ತು, ಪ್ರಗತಿಪರ ಕೃಷಿಕ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಮಂಗಳೂರು ಉದ್ಯಮಿ ಕೆ. ದೇವಾನಂದ ಶೆಟ್ಟಿ, ಮಂಚಿ ಶ್ರೀ ಧರ್ಮ ಜಾಗರಣ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಮೊದಲಾದವರು ಮಾತನಾಡಿದರು.
Related Articles
Advertisement
ಸ್ವಾಗತ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಕರ್ಪಿಕಾರು ರವೀಂದ್ರನಾಥ ಶೆಟ್ಟಿ ವಂದಿಸಿದರು.