Advertisement
ನಿಧನಹೊಂದಿದ ತಂದೆ, ತಾಯಿ, ಪೂರ್ವಜರ ಸದ್ಗತಿಗಾಗಿ ಶ್ರಾದ್ಧಕರ್ಮಗಳನ್ನು ನಡೆಸಬೇಕು; ಅವು ಪುಣ್ಯಕಾರ್ಯಗಳು. ಶಿವಸನ್ನಿಧಿಯಾಗಿರುವ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಅವುಗಳನ್ನು ನಡೆಸಲು ಭವನ ನಿರ್ಮಿಸಲಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಧರ್ಮವಿರೋಧಿಗಳು, ನಾಸ್ತಿಕರು ಅಂದರೆ ದೇವರಿಲ್ಲ ಅನ್ನುವವರು ದೇವಸ್ಥಾನದ ಆಡಳಿತ ಬಯಸುವ ಉದ್ದೇಶವೇನು ? ಕೇರಳದಲ್ಲಿ ದೇಗುಲವೊಂದರ ಆಡಳಿತ ನಡೆಸಲು ಮುಂದಾದ ವ್ಯವಸ್ಥೆಯನ್ನು ಉಲ್ಲೇಖೀಸಿ ಅವರು ಈ ರೀತಿ ಪ್ರಶ್ನಿಸಿದರು. ಇಂದು ದೊರೆ ಮತ್ತು ಗುರು ಕಷ್ಟ, ಕ್ಲೇಷಗಳನ್ನು ಸ್ವೀಕರಿಸಿ, ಜನರಿಗೆ ಒಳ್ಳೆಯದನ್ನು ನೀಡಬೇಕು ಎಂದರು.
Related Articles
ಸಂರಕ್ಷಣೆ, ಗೋಸ್ವರ್ಗದಂಥ ಕಾರ್ಯìಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದರು.
Advertisement
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್.ಎನ್. ಕೂಡೂರು ಮುಖ್ಯ ಅತಿಥಿಗಳಾಗಿದ್ದರು.
ಉಮಾಶಿವ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಕ್ಷೇತ್ರದ ಕುರಿತು ಮಾಹಿತಿ ನೀಡಿದರು.
ಪ್ರತಿಭಾ ಪುರಸ್ಕಾರಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ವಿಟ್ಲದ ವಿಟuಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ ಮತ್ತು ಪುತ್ತೂರು ವಿವೇಕಾನಂದ ಹೆ„ಸ್ಕೂಲಿನ ಸಿಂಚನಲಕ್ಷ್ಮಿ ಅವರನ್ನು ಪುರಸ್ಕರಿಸಲಾಯಿತು. ನೂತನ ಕಟ್ಟಡಕ್ಕೆ ನೆರವಾದ ದಾನಿಗಳನ್ನು ಶ್ರೀಗಳು ಅಭಿನಂದಿಸಿ, ಆಶೀರ್ವದಿಸಿದರು. ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ. ಗೋಪಾಲಕೃಷ್ಣ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಕಲ್ಲಡ್ಕ ವಲಯಾಧ್ಯಕ್ಷ ಯು.ಎಸ್. ಚಂದ್ರಶೇಖರ ಭಟ್ ನೆಕ್ಕಿದರವು ಹಾಗೂ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಕವಿತಾ ಅಡೂರು ಅವರಿಂದ ಡಿವಿಜಿ ಅವರ ಕಗ್ಗದ ಬೆಳಕು ಕಾರ್ಯ ಕ್ರಮ ಪ್ರಸ್ತುತಗೊಂಡಿತು.
ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಕೆ.ಟಿ. ಗಣೇಶ್ ನಿರೂಪಿಸಿದರು.