Advertisement

ತಾಪಮಾನ ನಿಯಂತ್ರಿಸದಿದ್ದರೆ ಸಂಕಷ್ಟ

01:03 PM Apr 23, 2017 | Team Udayavani |

ಮೈಸೂರು: ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಾಗೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ಗಂಭೀರ ಚಿಂತನೆ ನಡೆಸದಿದ್ದಲ್ಲಿ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಗ್ರೀನ್‌ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಮಹಾರಾಜ ಕಾಲೇಜು ಕ್ಯಾಂಟಿನ್‌ನಲ್ಲಿ ವಿಶ್ವಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿ ಸಿದ್ದ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತ ನಾಡಿದ ಅವರು, ಈ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳ್ಳದೆ ವರ್ಷವೀಡಿ ಆಚರಣೆ ಯಾಗಬೇಕು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಮತ್ತೂಂದೆಡೆ ಜನಸಂಖ್ಯೆ ಯಲ್ಲೂ  ಭಾರೀ  ಏರಿಕೆಯಾಗುತ್ತಿದೆ. ಹೀಗಾಗಿ ಈ ವಿಷಯಗಳ ಕುರಿತು ಗಂಭೀರ ಚಿಂತನೆ ಮಾಡಬೇಕಿದ್ದು, ಕುತ್ತಿಗೆಗೆ ಬಂದಾಗ ಎಚ್ಚೆತ್ತುಕೊಳ್ಳದೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕು ಎಂದರು.

ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಮಾತನಾಡಿ, ರಂಗನತಿಟ್ಟು, ಕೆರೆ, ಹೊಲ, ಬಂಡೀಪುರ, ಹಿಮಾಲಯ, ಮೈಸೂರು ಹಾಗೂ ಸುತ್ತಮುತ್ತ ಕಡೆಗಳಲ್ಲಿ ಸೆರೆ ಹಿಡಿದ ಛಾಯಾಚಿತ್ರ ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಒಂದು ಚಿತ್ರದಿಂದ ಒಬ್ಬರಿಗೆ ಪರಿಸರದ ಬಗ್ಗೆ ಅರಿವು ಮೂಡಿದರೆ ಪ್ರದರ್ಶನ ಸಾರ್ಥಕವಾದಂತೆ ಎಂದರು.

ಛಾಯಾಚಿತ್ರ ಪ್ರದರ್ಶನದಲ್ಲಿ ಬೇಟೆಗಾಗಿ ಕಾಯುತ್ತಿರುವ ಚಿರತೆ, ಯಾರ ಹಂಗಿಲ್ಲದೇ ಸ್ವತ್ಛಂದ ವಾಗಿ ವಿಹರಿಸುತ್ತಿರುವ ಹುಲಿ, ಮೈ ಮೇಲೆ ಧೂಳು ಎರಚಿಕೊಳ್ಳುತ್ತಿರುವ ಆನೆ, ಗೂಡು ಕಟ್ಟುತ್ತಿರುವ ಕೊಕ್ಕರೆ, ಮರಿಯೊಂದಿಗೆ ಕಾಲ ಕಳೆಯುತ್ತಿರುವ ಕರಡಿ, ಈಗಷ್ಟೇ ಜನಿಸಿ ಗೂಡಿನಿಂದ ಜಾರಿ ನೆಲಕ್ಕೆ ಬೀಳುತ್ತಿರುವ ಹಕ್ಕಿ,

Advertisement

ಕೂಗುತ್ತಿರುವ ಹುಂಜ, ಗರ್ಜಿಸುತ್ತಿರುವ ಹುಲಿ, ತನ್ನ ಮರಿಗಳಿಗೆ ಕಾಳು ತಿನ್ನಿಸುತ್ತಿರುವ ಹಕ್ಕಿ ಸೇರಿದಂತೆ ಮೈಸೂರಿನಿಂದ ಜಮ್ಮು ಕಾಶ್ಮೀರದವರೆಗೆ ಲೋಕೇಶ್‌ ಮೊಸಳೆ ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿರುವ ಚಿತ್ರಗಳು ನೋಡುಗರ ಗಮನ ಸೆಳೆಯಿತು.ಪೊ›.ಸಿ.ಪಿ.ಸುನೀತಾ, ಐಕ್ಯೂಸಿ ನಿರ್ದೇಶಕಿ ಪೊ›.ಅನಿತಾ ಬ್ರಾಕ್ಸ್‌,  ಪೊ›.ಲಿಂಬ್ಯಾ ನಾಯ್ಕ,  ಪ್ರಮೀಳಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next