Advertisement

Temperature: ಈ ವರ್ಷ 125 ಸಾವಿರ ವರ್ಷಗಳಲ್ಲೇ ಅಧಿಕ ತಾಪಮಾನ

10:21 PM Nov 09, 2023 | Team Udayavani |

ಬ್ರುಸೆಲ್ಸ್‌: ಜಾಗತಿಕ ತಾಪಮಾನ ಏರಿಕೆ ಸಮಸ್ಯೆ ವಿಶ್ವಕ್ಕೆ ತಲೆನೋವಾಗಿರುವ ನಡುವೆಯೇ 2023 ಕಳೆದ 125 ಸಾವಿರ ವರ್ಷಗಳಲ್ಲೇ ಅತ್ಯಧಿಕ ತಾಪಮಾನ ದಾಖಲಾದ ವರ್ಷವಾಗಲಿದೆ ಎಂದು ಐರೋಪ್ಯ ಒಕ್ಕೂಟದ ವಿಜ್ಞಾನಿಗಳು ಹೇಳಿದ್ದಾರೆ.

Advertisement

ಇಯುನ ಕೋಪರ್ನಿಕಸ್‌ ಹವಾಮಾನ ಬದಲಾವಣೆ ಸೇವೆ (ಸಿ3ಎಸ್‌)ಯ ಉಪ ನಿರ್ದೇಶಕ ಸಮಂತಾ ಬರ್ಗೆಸ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, 2019ರ ಅಕ್ಟೋಬರ್‌ ತಿಂಗಳಿನಲ್ಲಿ ಜಾಗತಿಕ ಸರಾಸರಿ ತಾಪಮಾನ 15.3 ಡಿಗ್ರಿ ಸೆಲ್ಸಿಯಸ್‌ ಆಗಿದ್ದು, ಇದು 1850 ಮತ್ತು 1900ರ ದಶಕಕ್ಕೆ ಹೋಲಿಸಿದರೆ 1.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. 2019ಕ್ಕಿಂತಲೂ 0.4 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ 2023 ಅತ್ಯಧಿಕ ತಾಪಮಾನವನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಈವರೆಗೆ ವಿಶ್ವದಲ್ಲೇ ಅತ್ಯಂತ ಹೆಚ್ಚು ತಾಪಮಾನವಿದ್ದ ವರ್ಷವೆಂದು 2016 ಅನ್ನು ಪರಿಗಣಿಸಲಾಗಿತ್ತು. ಈಗ 2023 ಆ ದಾಖಲೆಯನ್ನು ಮುರಿಯುವ ಹಂತದಲ್ಲಿದೆ. ಪಳಯುಳಿಕೆ ಇಂಧನಗಳ ತೀವ್ರ ಬಳಕೆ, ಹಸಿರುಮನೆ ಅನಿಲ ಹೊರಸೂಸುವಿಕೆ ಇದಕ್ಕೆ ಕಾರಣವೆಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next